ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಗೆ ಜೈಲುವಾಸ ಸಾಕು ಸಾಕೆನಿಸಿದೆ. ಯಾವಾಗ ಇಲ್ಲಿಂದ ಹೋಗ್ತೀನಪ್ಪ ಅಂತಾ ದರ್ಶನ್ ಕಾಯ್ತಾ ಕುಳಿತಿದ್ದಾರೆ. ಇದರ ನಡುವೆ ಬೆನ್ನು ನೋವಿನ ಸಮಸ್ಯೆ ತೀವ್ರಗೊಂಡಿದ್ದು, ನಟನ ಆರೋಗ್ಯದ ದೃಷ್ಟಿಯಿಂದ ಕೇಳಿದ್ದೆಲ್ಲಾ ಸೌಲಭ್ಯ ಒದಗಿಸಿಕೊಡಲಾಗುತ್ತಿದೆ. ಅಲ್ಲದೇ ವೈದ್ಯರು ಬೆನ್ನು ನೋವಿಗೆ ಸರ್ಜರಿ ಅಗತ್ಯವಿದೆ ಎಂದು ಹೇಳಿದ್ದಕ್ಕೆ, ಟ್ರೀಟ್ ಮೆಂಟ್ ಕೊಡಿಸುವುದಕ್ಕೂ ಸಿದ್ಧತೆ ನಡೆಯುತ್ತಿದೆ. ಆದರೆ ದರ್ಶನ್ ಮಾತ್ರ ನನಗೆ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಬೇಡ ಎಂದು ಹೇಳ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಹೌದು, ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಚಿಕಿತ್ಸೆ ಬೇಡ ಎಂದು ಹೇಳ್ತಿರುವುದಕ್ಕೂ ಒಂದು ಕಾರಣವಿದೆ. ಅದೇನಂದರೆ ಕೆಲ ದಿನಗಳ ಹಿಂದೆ ನನಗೆ ಬಳ್ಳಾರಿ ಜೈಲು ಬೇಡ, ಬೆಂಗಳೂರು ಜೈಲಿಗೆ ಶಿಫ್ಟ್ ಮಾಡಿ ಎಂದು ಮನವಿ ಸಲ್ಲಿಸಿದ್ರು. ಅದು ಅಸಾಧ್ಯವಾದ ಕಾರಣ ಬೇಲ್ ಆದ್ರೂ ಸಿಗಲಿ ಎಂದು ಕಾದು ಕುಳಿತರು. ಆದರೆ ಸೆಷನ್ಸ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಜಾ ಆಗಿದೆ. ಹೀಗಾಗಿ ದರ್ಶನ್ ಹೈಕೋರ್ಟ್ಗೆ ಕ್ರಿಮಿನಲ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಹೈಕೋರ್ಟ್ ನಲ್ಲಾದ್ರೂ ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಸದ್ಯಕ್ಕೆ ಚಿಕಿತ್ಸೆ ಬೇಡ ಎನ್ನುತ್ತಿದ್ದಾರಂತೆ.