ಕರ್ನಾಟಕ

ದಾಸನಿಗೆ ವನವಾಸವಾದ ಬಳ್ಳಾರಿ ಜೈಲು..! ಬೇರೆ ಜೈಲಿಗೆ ಕಳಿಸಿ ಸಾರ್ ಎಂದು ಮನವಿ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಗೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿರುವ ಫೋಟೋ ವೈರಲ್ ಆದ ಬೆನ್ನಲ್ಲೇ, ಅವರನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಆದ್ರೀಗ ಬಳ್ಳಾರಿ ಜೈಲು ಕೂಡ ದರ್ಶನ್ ಗೆ ಬೇಡವಾಗಿದೆ. ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ದರ್ಶನ್ ಮನವಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್, ಬಳ್ಳಾರಿ ಜೈಲಿನಲ್ಲಿ ಸುಸ್ತಾಗಿದ್ದಾರೆ. ನನಗೆ ಬಳ್ಳಾರಿ ಜೈಲು ಬೇಡ ಬೆಂಗಳೂರಿನ ಸುತ್ತ-ಮುತ್ತ ಇರುವ ಜೈಲಿಗೆ ಶಿಫ್ಟ್ ಮಾಡಿ ಎನ್ನುತ್ತಿದ್ದಾರೆ. ನಮ್ಮ ಮನೆಯವರು ಕೂಡ ಬರಲು ಕಷ್ಟವಾಗುತ್ತಿದೆ. ವಾರಕ್ಕೆ ಒಮ್ಮೆ ಅಂದರೂ ಐದಾರು ಗಂಟೆ ಪ್ರಯಾಣ ಮಾಡಬೇಕು. ಇದರಿಂದ ತೊಂದರೆ ಆಗುತ್ತಿದೆ. ಹೀಗಾಗಿ ಬೇರೆ ಜೈಲಿಗೆ ಶಿಫ್ಟ್ ಮಾಡಿ ಎನ್ನುತ್ತಿದ್ದಾರೆ.