ಕರ್ನಾಟಕ

ದರ್ಶನ್​ ಅನಾರೋಗ್ಯ - ಶೀಘ್ರದಲ್ಲೇ ಆಪರೇಷನ್​ ಅಗತ್ಯ?

ಬಳ್ಳಾರಿಯಲ್ಲಿ ಸ್ಕ್ಯಾನಿಂಗ್ ಮಾಡಿದಕ್ಕೆ ದರ್ಶನ್​ ಅಸಮಾಧಾನ

ಬಳ್ಳಾರಿ - ಚಾಲೆಜಿಂಗ್ ಸ್ಟಾರ್ ,ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಜೈಲಿನಲ್ಲಿ ದರ್ಶನ್ಗೆ ಬೆನ್ನುನೋವು ಹೆಚ್ಚಾಗಿತು. ಈ ಸಂಬಂದ ಎಂಆರ್ಐ ಸ್ಯ್ಕಾನ್ ಮಾಡಿಸಿದಾಗ ವೈದ್ಯರು ಆಪರೇಷನ್ ಸಲಹೆ ನೀಡಿದ್ದಾರೆ.ಹೀಗಾಗಿ ಅಧಿಕಾರಿಗಳು ಹಾಗೂ ಕುಟುಂಬ ಸದಸ್ಯರು ಮುಂದಿನ ಕ್ರಮದ ಬಗ್ಗೆ ಮಾತುಕತೆ ಮಾಡುತ್ತಿದ್ದಾರೆ.

ಇತ್ತ ದರ್ಶನ್ ಬಳ್ಳಾರಿಯಲ್ಲಿ ಸ್ಕ್ಯಾನಿಂಗ್ ಮಾಡಿದಕ್ಕೆ ಸಿಬ್ಬಂದಿ ಜೊತೆ ಅಸಮಾಧಾನ ಹೊಂದಿದ್ದಾರೆ. ಇನ್ನು ದರ್ಶನ್ ಆಸ್ಪತ್ರೆ ಹೋದಾಗ ಅಭಿಮಾನಿಗಳು ಸುತ್ತುವರೆಯುತ್ತಾರೆ ಎಂಬ ಮಾತನ್ನು ಜೈಲು ಸಿಬ್ಬಂದಿ ಜತೆ ದರ್ಶನ್ ಹಂಚಿಕೊಂಡಿದ್ದಾರೆ.ಹಾಗೇ ದರ್ಶನ್ ಆಸ್ಪತ್ರೆಗೆ ಸ್ಕ್ಯಾನಿಂಗ್ಗಾಗಿ ತೆರಳಿದಾಗ ಅಭಿಮಾನಿಗಳ ದಂಡೇ ನೆರದಿತು. 

ಮುಂದಿನ ಕೆಲವು ದಿನಗಳಲ್ಲೇ ಆಪರೇಷನ್ ಅಗತ್ಯ ಎಂದು ವೈದ್ಯರ ತಂಡ ಸ್ಪಷ್ಟಪಡಿಸಿದೆ.ಹಲವು ತಿಂಗಳ ಹಿಂದೆ ದರ್ಶನ್ಗೆ ಕೈ ಸಂಬಂಧ ಆಪರೇಷನ್ ಸಹ ಆಗಿತು. ಇನ್ನು ಹೆಂಡತಿ ತಳ್ಳಿಸಿ ಜೈಲು ಸೇರಿದಾಗ ಅನಾರೋಗ್ಯ ಕಾರಣ ನೀಡಿ ಬೆಂಗಳೂರಿನ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದಿದ್ದರು ದರ್ಶನ್.