ಕರ್ನಾಟಕ

ಮೈಸೂರಿನಲ್ಲಿ ದರ್ಶನ್ ವಿಶ್ರಾಂತಿ ಅವಧಿ ಮುಕ್ತಾಯ.. ಇಂದೇ ಬೆಂಗಳೂರಿಗೆ ವಾಪಸ್..!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್‌ ವಿಶ್ರಾಂತಿ ಅವಧಿ ಮುಗಿದಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್‌ ವಿಶ್ರಾಂತಿ ಅವಧಿ ಮುಗಿದಿದೆ. ಬೇಲ್ ಮೇಲೆ ಹೊರಗಿರುವ ಕೊಲೆ ಆರೋಪಿ ದರ್ಶನ್, ಸದ್ಯ ಮೈಸೂರಿನ ಫಾರಂ ಹೌಸ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವಧಿ ಮುಗಿದಿರುವ ಹಿನ್ನೆಲೆ ಇಂದೇ ಮೈಸೂರು ಬಿಟ್ಟು ಬೆಂಗಳೂರಿಗೆ ತೆರಳಲಿದ್ದಾರೆ. ಮೈಸೂರಿನಲ್ಲಿದ್ದಾಗಲೂ ಬೆನ್ನು ನೋವಿಗೆ ಪಡೆಯುತ್ತಿದ್ದ ದರ್ಶನ್‌, ಇಂದು ಬೆಂಗಳೂರಿಗೆ ವಾಪಸ್‌ ಆಗಲಿದ್ದಾರೆ. ಮೈಸೂರಿನ ಟಿ.ನರಸೀಪುರದಲ್ಲಿರುವ ಫಾರಂ ಹೌಸ್‌ನಲ್ಲಿ ಉಳಿಯಲು ಕಳೆದ ಡಿಸೆಂಬರ್‌ 20ರಿಂದ ಇಂದಿನವರೆಗೆ ನ್ಯಾಯಾಲಯದಿಂದ ಅನುಮತಿ ಪಡೆದಿದ್ದರು.