ಕರ್ನಾಟಕ

ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್

ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ದರ್ಶನ್​ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ, ರಾಜಾಥಿತ್ಯ ಸಿಗುತ್ತಿರುವ ಕುರಿತು ಫೋಟೋ ವೈರಲ್ ಆದ ಬೆನ್ನಲ್ಲೇ, ದರ್ಶನ್ ನ ಬಳ್ಳಾರಿ ಜೈಲಿಗೆ ಕರೆದೊಯ್ಯಲಾಗುತ್ತಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ನ, ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಈಗಾಗಲೇ ಟಿಟಿ ವಾಹನದಲ್ಲಿ ನಟ ದರ್ಶನ್ ನ ಕರೆದೊಯ್ಯುತ್ತಿದ್ದು, ಅನಂತಪುರ ಮಾರ್ಗವಾಗಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಮೊದಲು ತುಮಕೂರು ಮಾರ್ಗವಾಗಿ ಬಳ್ಳಾರಿಗೆ ತೆರಳಲು ಪ್ಲಾನ್ ಮಾಡಿದ್ದ ಪೊಲೀಸರು, ಇದ್ದಕ್ಕಿದ್ದಂತೆ ರೂಟ್ ಚೇಂಜ್ ಮಾಡಿದ್ದಾರೆ. ರಸ್ತೆಯುದ್ದಕ್ಕೂ ದರ್ಶನ್ ಅಭಿಮಾನಿಗಳನ್ನು ದಾಳಿ ಮಾಡುವುದನ್ನು ತಪ್ಪಿ ಸಲು ಹಾಗೂ ಭದ್ರತಾ ದೃಷ್ಟಿಯಿಂದ ಅನಂತಪುರ ಮಾರ್ಗವಾಗಿ ದರ್ಶನ್ನ್ನು ಕರೆದುಕೊಂಡು ಹೋಗಲಾಗ್ತಿದೆ. ಬಳ್ಳಾ ರಿಯ ಸೆಂಟ್ರಲ್ ಜೈಲಿನಲ್ಲಿ ದರ್ಶನ್ನನ್ನು ಇಡಲಿರುವ ಸೆಲ್ಗೆ ಹೈ ಸೆಕ್ಯು ರಿಟಿ ಮಾಡಲಾಗಿದೆ. 15 ಸೆಲ್ಗಳಿರುವ ಕಡೆ ದರ್ಶನ್ಗೆ ಇರಲು ವ್ಯ ವಸ್ಥೆ ಮಾಡಲಾಗಿದೆ. ಇಬ್ಬ ರು ವಾಚ್ಗಾರ್ಡ್ ಹಾಗೂ ಒಬ್ಬ ಎಎಸ್ಐನ್ನು ನಿಯೋಜಿಸಲಾಗಿದೆ.