ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ರೋಚಕ ಕೊಲೆ ಕೇಸ್ ಬೆಳಕಿಗೆ ಬಂದಿದೆ. ಮಗಳೇ ತಂದೆಯ ಕೊಲೆಯ ಹಿಂದಿನ ಸತ್ಯವನ್ನ ಬಯಲಿಗೆಳೆದಿದ್ದಾಳೆ. ತಾಯಿಯೇ ತಂದೆ ಕೊಲೆ ಮಾಡಿದ್ದಾಳೆಂದು ಆರೋಪಿಸಿ, ತಾಯಿ ವಿರುದ್ಧವೇ ಪುತ್ರಿ ಸಂಜನಾ ಪದ್ಮಣ್ಣನ್ನವರ ದೂರು ದಾಖಲಿಸಿದ್ದಾಳೆ.
ಅಕ್ಟೋಬರ್ 9 ರಂದು ಬೆಳಗಾವಿಯ ಮಹಾಂತೇಶ ನಗರದ ನಿವಾಸಿ ಸಂತೋಷ ಪದ್ಮಣ್ಣನ್ನವರ ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಸಂತೋಷ ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು. ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಪುತ್ರಿ ಸಂಜನಾಗೆ ತಂದೆ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಗಳ ಪರಿಶೀಲನೆಗೆ ಪುತ್ರಿ ಸಂಜನ ಮುಂದಾಗಿದ್ದಾಳೆ. ಈ ವೇಳೆ ಪತ್ರಿಗೆ ಗದರಿಸಿ ತಾಯಿ ಉಮಾ ಸ್ನಾನ ಮಾಅಡಲು ಹೋಗುವಂತಗೆ ಸೂಚನೆ ನೀಡಿದ್ದಾಳೆ. ಆದರೆ, ಸ್ನಾನ ಮಾಡಿ ವಾಪಸ್ ಬಂದು ನೋಡುವುದರಲ್ಲಿ ಸಿಸಿಟಿವಿ ದೃಶ್ಯಗಳು ಡಿಲೀಟ್ ಆಗಿವೆ. ಇದರಿಂದ ಅನುಮಾನಗೊಂಡ ಸಂಜನಾ ತಾಯಿ ವಿರುದ್ಧ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ತಂದೆ ಸಾವು ಅಸಹಜ ಅಲ್ಲಾ ಎಂದು ದೂರು ದಾಖಲಿಸಿದ್ದು, ಅಕ್ಕ ಪಕ್ಕ ಮನೆಯವರ ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಅಪರಿಚಿತರು ಮನೆ ಪ್ರವೇಶಿಸಿದ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಇದರ ಆಧಾರದ ಮೇಲೆ ಪತ್ನಿ ಉಮಾಳನ್ನ ತೀವ್ರ ವಿಚಾರಣೆಗೆ ಒಳ ಪಡೆಸಿದ್ದಾರೆ. ಸಂತೋಷ ಪದ್ಮಣ್ಣವರ ಮತ್ತು ಪತ್ನಿ ಮಧ್ಯೆ ಕೌಟುಂಬಿಕ ಕಲಹ ಇರೋದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸದ್ಯ ಕೋರ್ಟ ಅನುಮತಿ ಪಡೆದು ಮೃತದೇಹವನ್ನ ಸ್ಮಶಾನದಿಂದ ಹೊರಗೆ ತೆಗೆಯಲು ಪೊಲೀಸರು ಮುಂದಾಗಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಒಳ ಪಡಿಸದ ಬಳಿಕವೇ ಪ್ರಕರಣದ ಸತ್ಯಾಸತ್ಯ ಹೊರಗೆ ಬರಲಿದೆ