ಕರ್ನಾಟಕ

ಮಹಿಳೆಯರ ಜಗಳ ಬಿಡಿಸಲು ಹೋದ ವ್ಯಕ್ತಿಯೇ ಸಾವು

ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಗಾದೆ ಇದೆ. ಆದ್ರೆ ಇಲ್ಲಿ ನಡೆದ ಘಟನೆಯಲ್ಲಿ ಇಬ್ಬರ ಜಗಳದಲ್ಲಿ ಓರ್ವನ ಪ್ರಾಣಪಕ್ಷಿಯೇ ಹಾರಿಹೋಗಿದೆ.

ಮೈಸೂರು : ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಗಾದೆ ಇದೆ. ಆದ್ರೆ ಇಲ್ಲಿ ನಡೆದ ಘಟನೆಯಲ್ಲಿ ಇಬ್ಬರ ಜಗಳದಲ್ಲಿ ಓರ್ವನ ಪ್ರಾಣಪಕ್ಷಿಯೇ ಹಾರಿಹೋಗಿದೆ.

ಯೆಸ್, ಮಹಿಳೆಯರ ಕಿತ್ತಾಟದ ನಡುವೆ ಜಗಳ ಬಿಡಿಸಲು ಹೋದ ವ್ಯಕ್ತಿಯೇ ಸಾವನ್ನಪ್ಪಿರೋ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ತಾಲೂಕಿನ ದೊಡ್ಡೇಬಾಗಿಲು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಮಹದೇವಸ್ವಾಮಿ (45) ವರ್ಷ ಮೃತ ದುರ್ದೈವಿ. ರಾಜಮ್ಮ ಹಾಗೂ ನಂಜಮ್ಮ ಎಂಬುವವರ ನಡುವೆ ಗಲಾಟೆ ನಡೆದಿತ್ತು. ಇವರ ಗಲಾಟೆ ಬಿಡಿಸಲು ಹೋದ ಮಹದೇವಸ್ವಾಮಿ, ಈವೇಳೆ ಈತನ ಪತ್ನಿ ಶಶಿಕಲಾ ಮೇಲೆ ರಾಜಮ್ಮ ಹಲ್ಲೆ ಮಾಡಿದ್ದಾಳೆ. ಪತ್ನಿ ಶಶಿಕಲಾ ರಕ್ಷಣೆಗೆ ಮುಂದಾದ ಪತಿ ಮಹದೇವಸ್ವಾಮಿ ಮೇಲೆಯೂ ರಾಜಮ್ಮ ಹಲ್ಲೆ ಮಾಡಿದ್ದಾಳೆ. ಆದ್ರೆ ಹಲ್ಲೆಯಲ್ಲಿ ಮಹದೇವಸ್ವಾಮಿ ಮರ್ಮಾಂಗಕ್ಕೆ ಪೆಟ್ಟು ಬಿದ್ದ ಹಿನ್ನಲೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇನ್ನು ಮಾಹಿತಿ ತಿಳಿದ  ಟಿ ನರಸೀಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.