ವಿದೇಶ

ದ.ಕೊರಿಯಾ ವಿಮಾನ ದುರಂತದಲ್ಲಿ 179 ಪ್ರಯಾಣಿಕರು ಸುಟ್ಟುಕರಕಲು..!

ದಕ್ಷಿಣಕೊರಿಯಾದ ವಿಮಾನ ಪತನ ದುರಂತ ಪ್ರಕರಣದಲ್ಲಿ ಸಾವಿನ ಸಂಖ್ಯೆ 179ಕ್ಕೆ ಏರಿಕೆ ಕಂಡಿದೆ..

ದಕ್ಷಿಣಕೊರಿಯಾದ ವಿಮಾನ ಪತನ ದುರಂತ ಪ್ರಕರಣದಲ್ಲಿ ಸಾವಿನ ಸಂಖ್ಯೆ 179ಕ್ಕೆ ಏರಿಕೆ ಕಂಡಿದೆ.. ಥೈಲ್ಯಾಂಡ್‌ನಿಂದ ಹಿಂದಿರುಗುತ್ತಿದ್ದ  181 ಪ್ರಯಾಣಿಕರಿದ್ದ ಜೆಜು ಏರ್‌ವಿಮಾನಯಾನ ಸಂಸ್ಥೆಯ ಪ್ಯಾಸೆಂಜರ್‌ ಫ್ಲೈಟ್‌,, ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಕ್ಕಿ ಹೊಡೆದ ಹಿನ್ನೆಲೆ ಎಮೆರ್ಜೆನ್ಸಿ ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು, ನೋಡನೋಡುತ್ತಿದ್ದಂತೆ ವಿಮಾನ ಧಗಧಗನೆ ಹೊತ್ತಿ ಉರಿದಿತ್ತು.. ಭಾರೀ ಅವಘಡದಲ್ಲಿ 181 ಪ್ರಯಾಣಿಕರ ಪೈಕಿ ಅದೃಷ್ಟವಶಾತ್‌ ಇಬ್ಬರು ಬದುಕುಳಿದಿದ್ದಾರೆ.. ದುರಂತ ಬೆನ್ನಲ್ಲೇ ಅಗ್ನಿಶಾಮಕ ದಳ, ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸುವಷ್ಟರಲ್ಲಿ ವಿಮಾನದಲ್ಲಿದ್ದ 179 ಪ್ರಯಾಣಿಕರ ಪ್ರಾಣಪಕ್ಷಿ ಹಾರಿ ಹೋಗಿತ್ತು, ಪರಿಹಾರ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಬೆಂಕಿ ನಂದಿಸಿದ್ದಾರೆ.. ವಿಮಾನದಲ್ಲಿ ಸಿಕ್ಕಿ ಹಾಕಿಕೊಂಡಿರುವ ಮೃತದೇಹಗಳನ್ನು ಹೊರ ತೆಗೆಯುವ ಕಾರ್ಯ ಬಿರುಸುಗೊಳಿಸಿದೆ.. ಮತ್ತೊಂದೆಡೆ ಘಟನೆ ಕುರಿತು ಕ್ಷಮೆ ಕೇಳಿರುವ ಜೆಜು ಏರ್ ಸಂಸ್ತೆ, ವಿಮಾನ ಪತನ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದೆ..