ವಿಧಾನಸೌಧದ ಆವರಣದಲ್ಲಿರುವ ಬೀದಿ ನಾಯಿಗಳಿಗೆ ಶೆಲ್ಟರ್ ನಿರ್ಮಾಣ ಮಾಡುವ ಐತಿಹಾಸಿಕ ತೀರ್ಮಾನವನ್ನು ಸ್ಪೀಕರ್ ಯು.ಟಿ ಖಾದರ್ ತೆಗೆದುಕೊಂಡಿದ್ದಾರೆ.. ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಸ್ಪೀಕರ್ ಈ ಕ್ರಮಕೈಗೊಂಡಿದ್ದಾರೆ.. ನಾಯಿಗಳ ನಿರ್ವಹಣೆಯನ್ನು ಪ್ರಾಣಿದಯಾ ಸಂಘಕ್ಕೆ ನೀಡಲು ಚಿಂತನೆ ನಡೆಸಲಾಗಿದೆ.. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ಯು.ಟಿ. ಖಾದರ್, ಮನುಷ್ಯರಿಗೆ ಬದುಕಲು ಎಷ್ಟು ಹಕ್ಕು ಇದೆ, ಅದೇ ರೀತಿ ಪ್ರಾಣಿಗಳಿಗೂ ಕೂಡ ಅಷ್ಟೇ ಹಕ್ಕಿದೆ ಎಂದಿದ್ದಾರೆ.. ಪರ-ವಿರೋಧ ಚರ್ಚೆ ಇದ್ದೇ ಇರುತ್ತೆ, ವಿಧಾನಸೌಧದ ಆವರಣದಲ್ಲಿಯೇ ಒಂದು ಜಾಗ ಕೊಟ್ಟು ಪ್ರಾಣಿಗಳನ್ನ ನೋಡಿಕೊಳ್ಳಲು ಎನ್‌ಜಿಒಗೆ ಜವಾಬ್ದಾರಿ ನೀಡ್ತೇವೆ ಎಂದಿದ್ದಾರೆ.. ನಾಯಿಗಳಿಂದ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ವ್ಯವಸ್ಥೆ ಮಾಡಲಿಕ್ಕೆ ನಾವು ತೀರ್ಮಾನ ಮಾಡಿದ್ದೇವೆ, ವಿಧಾನಸೌಧದಲ್ಲಿರುವ ಬೀದಿನಾಯಿಗಳಿಗೆ ಶೆಲ್ಟರ್ ಕಟ್ಟಲಿಕ್ಕೆ ನಾನು ಮತ್ತು ಸಭಾಪತಿಗಳು ಹೇಳಿದ್ದೇವೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ..