ಕ್ರೀಡೆಗಳು

ಜೀನ್ಸ್‌ ಧರಿಸಿ ಟೂರ್ನಿಗೆ ಬಂದ‌ ಮ್ಯಾಗ್ನಸ್ ಕಾರ್ಲ್ಸನ್ ಗೆ ಅನರ್ಹತೆ ಶಿಕ್ಷೆ

ಮಾಜಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್ ಕಾರ್ಲ್ಸನ್ ಜೀನ್ಸ್‌ ಪ್ಯಾಂಟ್‌ ಧರಿಸಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬಂದಿದ್ದಕ್ಕಾಗಿ ಅನರ್ಹತೆಯ ಶಿಕ್ಷೆಗೆ ಒಳಗಾಗಿದ್ದಾರೆ.

ನ್ಯೂಯಾರ್ಕ್‌: ಮಾಜಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್ ಕಾರ್ಲ್ಸನ್ ಜೀನ್ಸ್‌ ಪ್ಯಾಂಟ್‌ ಧರಿಸಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬಂದಿದ್ದಕ್ಕಾಗಿ ಅನರ್ಹತೆಯ ಶಿಕ್ಷೆಗೆ ಒಳಗಾಗಿದ್ದಾರೆ.

ಅಮೆರಿಕದಲ್ಲಿ ನಡೆಯುತ್ತಿರುವ ವರ್ಲ್ಡ್‌ ರ್ಯಾಪಿಡ್‌ ಆಂಡ್‌ ಬ್ಲಿಡ್ಜ್‌ ಚಾಂಪಿಯನ್‌ಷಿಪ್‌ ನಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಆದರೆ ಮ್ಯಾಗ್ನಸ್ ಕಾರ್ಲ್ಸನ್ ಜೀನ್ಸ್‌ ಪ್ಯಾಂಟ್‌ ಧರಿಸಿ ಬಂದಿದ್ದರು ಫಿಡೆ ನಿಯಮದಂತೆ ಜೀನ್ಸ್‌ ಪ್ಯಾಂಟ್‌ ಧರಿಸಿ ಚೆಸ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವಂತಿಲ್ಲ. ಈ ಹಿನ್ನೆಲೆಯಲ್ಲಿ ಆಯೋಜಕರು ಪ್ಯಾಂಟ್‌ ಬದಲಿಸಿ ಬರುವಂತೆ ಸೂಚಿಸಿದರು. ಮ್ಯಾಗ್ನಸ್ ಕಾರ್ಲ್ಸನ್ ಪ್ಯಾಂಟ್‌ ಬದಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ 200 ಡಾಲರ್‌ ದಂಡ ವಿಧಿಸಲಾಗಿದೆ. ಜತೆಗೆ ಕಾರ್ಲ್ಸನ್‌ ರನ್ನು ಟೂರ್ನಿಯಿಂದ ಅನರ್ಹಗೊಳಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮ್ಯಾಗ್ನಸ್ ಕಾರ್ಲ್ಸನ್ “ಫಿಡೆ ನಿಯಮಗಳಿಂದ ನಾನು ಸುಸ್ತಾಗಿದ್ದೇನೆ. ನನಗೆ ಈ ನಿಯಮಗಳು ಬೇಕಾಗಿಲ್ಲ. ಇದೊಂದುಗ ಮೂರ್ಖ ನಿಯಮ. ಹಾಗಾಗಿ ನಾನು ಟೂರ್ನಿಯಲ್ಲಿ ಪಾಲ್ಗೊಳ್ಳದೆ ವಾಪಸ್‌ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

OOTD pic.twitter.com/9reOP6zuJv

ಈ ಘಟನೆ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಫಿಡೆ ವರ್ಲ್ಡ್‌ ರ್ಯಾಪಿಡ್‌ ಆಂಡ್‌ ಬ್ಲಿಡ್ಜ್‌ ಚಾಂಪಿಯನ್‌ಷಿಪ್‌ ನಲ್ಲಿ ಡ್ರೆಸ್‌ ಕೋಡ್‌ ಜಾರಿಯಲ್ಲಿದೆ. ಮ್ಯಾಗ್ನಸ್ ಕಾರ್ಲ್ಸನ್ ಡ್ರೆಸ್‌ ಕೋಡ್‌ ಪಾಲನೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ 200 ಡಾಲರ್‌ ದಂಡ ವಿಧಿಸಿ ಜೀನ್ಸ್‌ ಪ್ಯಾಂಟ್‌ ಬದಲಿಸಲು ಅವಕಾಶ ನೀಡಲಾಗಿತ್ತು. ಆದರೆ ಮ್ಯಾಗ್ನಸ್ ಕಾರ್ಲ್ಸನ್ ಬಟ್ಟೆ ಬದಲಿಸಲು ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಲಾಗಿದೆ. ಇದಕ್ಕೂ ಮೊದಲು ಇಯಾನ್ ನೆಪೋಮ್ನಿಯಾಚ್ಚಿ ಎಂಬ ಸ್ಪರ್ಧಿ ಸ್ಪೋರ್ಟ್ಸ್‌ ಶೂ ಧರಿಸಿ ಬಂದಿದ್ದರು. ಅವರಿಗೂ ಡ್ರೆಸ್‌ ಕೋಡ್‌ ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಶೂ ಬದಲಿಸಿದ ಬಳಿಕ ಅವರು ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದೆ.

FIDE statement regarding Magnus Carlsen’s dress code breach

FIDE regulations for the World Rapid and Blitz Chess Championships, including the dress code, are designed to ensure professionalism and fairness for all participants.

Today, Mr. Magnus Carlsen breached the dress code… pic.twitter.com/SLdxBpzroe