ಕರ್ನಾಟಕ

ಹೆಚ್ಚಿನ ಹಣಕ್ಕೂ ಡಿಮ್ಯಾಂಡ್‌.. ಧಮ್ಕಿ.. ಆಟೋ ಹತ್ತುವ ಮುನ್ನ ಹುಷಾರ್..!

ಧಮ್ಕಿಗೆ ಹೆದರಿದ ವಿದ್ಯಾರ್ಥಿ ತನ್ನ ಬಳಿ ಇದ್ದ ರೂ.400 ನೀಡಿ, ರೂ.100ನ್ನು ಯುಪಿಐ ಮೂಲಕ ಪಾವತಿ ಮಾಡಿದ್ದಾನೆ. ಬಳಿಕ ಆಟೋ ಚಾಲಕನ ಹುಚ್ಚಾಟದ ವಿಡಿಯೋವನ್ನು ವಿದ್ಯಾರ್ಥಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಚಾಲಕನ ವರ್ತನೆಗೆ ಆಕ್ರೋಶ ಎಲ್ಲೆಡೆ ಆಕ್ರೋಶವ್ಯಕ್ತವಾಗಿದೆ.

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಆಟೋ ಚಾಲಕರನ ಮೇಲೆ ಪ್ರಯಾಣಿಕರ ಆರೋಪಗಳು ಹೆಚ್ಚಾಗುತ್ತಲೇ ಇವೆ. ದುಪ್ಪಟ್ಟು ದರ ಕೇಳ್ತಾರೆ ಅನ್ನೋದು ಅಷ್ಟೇ ಅಲ್ಲ ಪ್ರಯಾಣಿಕರಿಗೆ ಧಮ್ಕಿ, ಆವಾಜ್‌ ಹಾಕ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇವೆ. ಇಂಥಾ ಆರೋಪಗಳ ಮಧ್ಯೆ ಇದೀಗ ಇಂಥದ್ದೇ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಯಾಣಿಕನಿಗೆ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್‌ ಮಾಡಿರೋದು ಅಲ್ಲದೇ ಆಟೋ ಚಾಲಕ ಬೆದರಿಕೆ ಹಾಕಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ.

ಖಾಸಗಿ ಕಂಪನಿಯಲ್ಲಿ ಇಂಟರ್ನ್ಶಿಪ್ ಮುಗಿಸಿ ವಾಪಸ್ ಆಗುವ ವೇಳೆ 20 ವರ್ಷದ ಯುವಕನೋರ್ವ 'ನಮ್ಮ ಯಾತ್ರಿ' ಆ್ಯಪ್ ಮೂಲಕ ಬೆಳ್ಳಂದೂರಿನಿಂದ ಮೈಲಸಂದ್ರಕ್ಕೆ ಆಟೋ ಬುಕ್ ಮಾಡಿದ್ದಾನೆ. ಈ ವೇಳೆ ಆ್ಯಪ್‌ನಲ್ಲಿ 380 ರೂಪಾಯಿ ತೋರಿಸಿದೆ. ಆದ್ರೆ ಮನೆಗೆ ಬಂದ ಬಳಿಕ 500 ರೂಪಾಯಿ ನೀಡುವಂತೆ ಆಟೋ ಚಾಲಕ ಕೇಳಿದ್ದಾನೆ ಅನ್ನೋ ಆರೋಪವಿದೆ. ಅಷ್ಟೇ ಅಲ್ಲ ವಿದ್ಯಾರ್ಥಿ ಕೆಲಸ ಮಾಡುವ ಸ್ಥಳ ತಿಳಿದಿದ್ದು, ಅಲ್ಲಿಗೆ ಬಂದು ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.. ಧಮ್ಕಿಗೆ ಹೆದರಿದ ವಿದ್ಯಾರ್ಥಿ ತನ್ನ ಬಳಿ ಇದ್ದ ರೂ.400 ನೀಡಿ, ರೂ.100ನ್ನು ಯುಪಿಐ ಮೂಲಕ ಪಾವತಿ ಮಾಡಿದ್ದಾನೆ. ಬಳಿಕ ಆಟೋ ಚಾಲಕನ ಹುಚ್ಚಾಟದ ವಿಡಿಯೋವನ್ನು ವಿದ್ಯಾರ್ಥಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಚಾಲಕನ ವರ್ತನೆಗೆ ಆಕ್ರೋಶ ಎಲ್ಲೆಡೆ ಆಕ್ರೋಶವ್ಯಕ್ತವಾಗಿದೆ.