ಕರ್ನಾಟಕ

ಹಕ್ಕಿ ಜ್ವರ ಪತ್ತೆ ; ನೆರೆ ರಾಜ್ಯಗಳಿಂದ ಕೋಳಿ ಆಮದು ನಿಷೇಧ

ನೆರೆ ರಾಜ್ಯಗಳಲ್ಲಿ ಹಕ್ಕಿಜ್ವರ ಪ್ರಕರಣಗಳು ಪತ್ತೆಯಾದ ಹಿನ್ನಲೆ ಮುನ್ನೆಚ್ಚರಿಕಾ ಪ್ರಮವಾಗಿ ಕರ್ನಾಟಕದಲ್ಲಿ ಎಚ್ಚರಿಕೆ ವಹಿಸಿದ್ದು, ನೆರೆ ರಾಜ್ಯಗಳಿಂದ ಕೋಳಿ ಮತ್ತು ಮೊಟ್ಟೆಗಳನ್ನು ತರುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು: ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆ ಕರ್ನಾಟಕದಲ್ಲಿ ಎಚ್ಚರಿಕೆ ಸಂದೇಶವನನ್ನ ರವಾನಿಸಲಾಗಿದೆ. ಗಡಿ ಭಾಗದ ಜನರು ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಹೊರ ರಾಜ್ಯಗಳಿಂದ ಕೋಳಿಗಳ ಆಮದನ್ನ ನಿಷೇಧಿಸಲಾಗಿದೆ. 

ನೆರೆ ರಾಜ್ಯಗಳಲ್ಲಿ ಹಕ್ಕಿಜ್ವರ ಪ್ರಕರಣಗಳು ಪತ್ತೆಯಾದ ಹಿನ್ನಲೆ ಮುನ್ನೆಚ್ಚರಿಕಾ ಪ್ರಮವಾಗಿ ಕರ್ನಾಟಕದಲ್ಲಿ ಎಚ್ಚರಿಕೆ ವಹಿಸಿದ್ದು, ನೆರೆ ರಾಜ್ಯಗಳಿಂದ ಕೋಳಿ ಮತ್ತು ಮೊಟ್ಟೆಗಳನ್ನು ತರುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.