ಡಮಾಸ್ಕಸ್: ಬಷರ್ ಅಲ್ ಅಸ್ಸಾದ್ ಸರ್ಕಾರ ಪತನದ ಬಳಿಕ ಇಸ್ರೇಲ್ ಸೇನೆ ಸಿರಿಯಾ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಇನ್ನು ಈ ದಾಳಿಯ ವೇಳೆ ಸಣ್ಣ ಪ್ರಮಾಣದ ಪರಮಾಣು ಬಾಂಬ್ ಅನ್ನೂ ಸಹ ಸಿರಿಯಾ ಮೇಲೆ ಪ್ರಯೋಗಿಸಲಾಗಿದೆ ಎಂದು ವರದಿಯಾಗಿದೆ.
ಡಿಸೆಂಬರ್ 16 ರಂದು ಸಿರಿಯಾದ ಕರಾವಳಿಯಲ್ಲಿರುವ ಟಾರ್ಟಸ್ ನಲ್ಲಿರುವ ಶಸ್ತ್ರಾಗಾರದ ಮೇಲೆ ದೊಡ್ಡ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸಿರಿಯಾದ ಸ್ಕೌಡ್ ಕ್ಷಿಪಣಿಗಳ ಉತ್ಪಾದನಾ ಘಟಕವನ್ನು ನಾಶಪಡಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿತ್ತು. ಆದರೆ ತಜ್ಞರ ವರದಿಯ ಪ್ರಕಾರ, ಈ ದಾಳಿಯಿಂದ ಉಂಟಾದ ಹಾನಿ ನಿರೀಕ್ಷೆಗಿಂತ ಹೆಚ್ಚಾಗಿದೆ. ಸಿರಿಯಾ ಮೇಲಿನ ಈ ದಾಳಿಯಲ್ಲಿ ಇಸ್ರೇಲ್ ಒಂದು ಸಣ್ಣ ಪರಮಾಣು ಅಸ್ತ್ರವನ್ನು ಬಳಸಿದೆ ಎಂದು ಕೆಲವು ವರದಿಗಳು ಹೇಳಿವೆ.
ಇಸ್ರೇಲ್ ಸೇನೆ ಸಣ್ಣ ಪ್ರಮಾಣ ಪರಮಾಣು ಬಾಂಬ್ ದಾಳಿ ನಡೆಸಿದ್ದರಿಂದ ಟಾರ್ಟಸ್ ನಗರದಲ್ಲಿ 3.0 ತೀವ್ರತೆಯ ಭೂಕಂಪನ ದಾಖಲಾಗಿತ್ತು. ಜತೆಗೆ ಟಾರ್ಟಸ್‌ನಿಂದ 820 ಕಿ.ಮೀ. ದೂರದಲ್ಲಿರುವ ಟರ್ಕಿಯ ಇಜ್ನಿಕ್ ನಲ್ಲಿಯೂ ಭೂಕಂಪನದ ಅನುಭವವಾಗಿದೆ. ಜತೆಗೆ ದಾಳಿ ನಡೆದ ಸುಮಾರು 20 ಗಂಟೆಗಳ ನಂತರ ಟರ್ಕಿ ಮತ್ತು ಸೈಪ್ರಸ್‌ನಲ್ಲಿ ವಿಕಿರಣ ಮಟ್ಟ ಹಠಾತ್ ಹೆಚ್ಚಳವಾಗಿದೆ ಎಂದು ಯುರೋಪಿಯನ್ ಒಕ್ಕೂಟ ದಾಖಲಿಸಿದೆ. ಈ ಎರಡು ಘಟನೆಗಳ ಆಧಾರದ ಮೇಲೆ ಇಸ್ರೇಲ್ ಪರಮಾಣು ದಾಳಿ ನಡೆಸಿದೆ ಎಂದು ತಜ್ಞರು ಖಚಿತವಾಗಿ ತಿಳಿಸುತ್ತಿದ್ದಾರೆ.
ಮತ್ತೊಂದೆಡೆ, ರಷ್ಯಾದ ಮಾಧ್ಯಮಗಳು ಇಸ್ರೇಲ್ ಈ ದಾಳಿಯಲ್ಲಿ ಹೊಸ ವಿಧದ ಕ್ಷಿಪಣಿಯನ್ನು ಬಳಸಿದೆ ಎಂದು ಹೇಳಿಕೊಂಡಿವೆ. ಇದನ್ನು ಯುದ್ಧನೌಕೆಯಿಂದ ಹಾರಿಸಲಾಗಿದೆ ಎಂದಿವೆ. ಮತ್ತೆ ಕೆಲವೊಂದಿಷ್ಟು ವರದಿಗಳು ಅಮೆರಿಕ ನಿರ್ಮಿತ B61 ಬಾಂಬ್ ಅನ್ನು ಬಳಸಲಾಗಿದೆ ಎಂದಿವೆ. ಪರಮಾಣು ಬಾಂಬ್ ಬಳಕೆಯ ವರದಿಗಳ ಬೆನ್ನಲ್ಲೇ ಸಿರಿಯಾ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುವ ಸಾಧ್ಯತೆಗಳು ಹೆಚ್ಚುತ್ತಿವೆ. ಜತೆಗೆ ಮಧ್ಯಪ್ರಾಚ್ಯದಲ್ಲೂ ಸಹ ಉದ್ವಿಗ್ನತೆ ಉಂಟಾಗಿದೆ.
BREAKING NEWS :
Nuclear Incident 💥A Swiss nuclear researcher claims that Israel conducted a test of a small tactical nuclear bomb in Tartus, Syria. Satellite imagery reportedly reveals a 200-foot-wide strip of mountain obliterated and trees getting liquidated in recent attacks. pic.twitter.com/ZKS8N351OE