ಹಾಸನ ಜಿಲ್ಲೆ ಅರಕಲಗೂಡಿನ ತಹಶೀಲ್ದಾರ್ ಕಚೇರಿಯಲ್ಲಿ ದೊಡ್ಡ ಹೈಡ್ರಾಮವೇ ನಡೆದಿದೆ. ಜಮೀನು ವಿಚಾರಕ್ಕಾಗಿ ಭಾಸ್ಕರ್ ಹಾಗೂ ಮಂಜು ಎಂಬುವರು ಹೊಡೆದಾಡಿಕೊಂಡಿದ್ದಾರೆ. ಇಬ್ಬರ ನಡುವೆ ಜಮೀನು ವಿಚಾರಕ್ಕೆ ವ್ಯಾಜ್ಯ ನಡೆಯುತ್ತಿತ್ತು. ಇದೇ ವಿಚಾರ ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಿರುಗಿತ್ತು. ಇದರಿಂದ ಕೋಪಗೊಂಡ ರೆವಿನ್ಯೂ ಅಧಿಕಾರಿಗಳು, ಇಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅರಕಲಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.