ಕರ್ನಾಟಕ
ನಡೀ ಆ ಕಡೆ.. ಸೆಲ್ಫಿಗೆ ಬಂದ ಮಹಿಳಾ ಕಾರ್ಯಕರ್ತೆ ತಳ್ಳಿದ ಡಿಕೆಶಿ..!
ಸೆಲ್ಫಿಗಾಗಿ ಬಂದ ಮಹಿಳಾ ಕಾರ್ಯಕರ್ತೆಯರನ್ನ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳ್ಳಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ..
ಸೆಲ್ಫಿಗಾಗಿ ಬಂದ ಮಹಿಳಾ ಕಾರ್ಯಕರ್ತೆಯರನ್ನ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳ್ಳಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.. ಕುಂದಾನಗರಿಯಲ್ಲಿ 2 ದಿನಗಳ ಕಾಲ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ನಡೆಯುತ್ತಿದೆ.. ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಘಟಾನುಘಟಿ ನಾಯಕರು ಆಗಮಿಸುತ್ತಿದ್ದಾರೆ.. ಇಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕಾಂಗ್ರೆಸ್ ಸಂಸದ, ವಿಪಕ್ಷ ನಾಯಕ ರಾಹುಲ್ ಗಾಂಧಿ ಆಗಮಿಸುತ್ತಿದ್ದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿ ಕೈ ನಾಯಕರು ಸ್ವಾಗತಕ್ಕೆ ಬಂದಿದ್ದರು.. ಈ ವೇಳೆ ಸೆಲ್ಫಿಗಾಗಿ ಮುಗಿಬಿದ್ದ ಮಹಿಳೆಯರ ಮೇಲೆ ಡಿಕೆಶಿ ಗರಂ ಆಗಿದ್ದ ಪ್ರಸಂಗವೂ ನಡೆದಿದೆ..