ಯಾದಗಿರಿ : ಸಿಎಂ ಸಿದ್ದರಾಮಯ್ಯಗೆ ಮೂಡ ಸಂಕಷ್ಟ ಬೆನ್ನಲ್ಲೆ ಪೂಜಾರಿಯೊಬ್ಬರ ಕನಸಿನಲ್ಲಿ ಭವಿಷ್ಯವಾಣಿ ನುಡಿದಿದ್ದು, ಚರ್ಚೆಗೆ ಗ್ರಾಸವಾಗಿದೆ.
ಡಿಕೆ ಶಿವಕುಮಾರ್ ಅವರು ಮುಂದಿನ ಸಿಎಂ ಆಗಲಿದ್ದಾರೆ ಎಂದು ಪೂಜಾರಿ ಕನಸಿನಲ್ಲಿ ಯಾದಗಿರಿ ಗಡೇ ದುರ್ಗಾದೇವಿ ಆಗಮಿಸಿ ಭವಿಷ್ಯವಾಣಿ ನುಡಿದಿದ್ದಾಳೆ. ಈ ಬಗ್ಗೆ ಪೂಜಾರಿ ಮಹಾದೇವಪ್ಪ ಮಾತನಾಡಿದ್ದು, ಸಿಎಂ ಹುದ್ದೆ 50-50 ಹಂಚಿಕೆ ಎಂದು ದೇವಿ ಅಂದೇ ನಿರ್ಧರಿಸಿದ್ದಳು ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಹಾದೇವಪ್ಪ ಪೂಜಾರಿ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಪೂಜಾರಿ ನನ್ನ ಕನಸಿನಲ್ಲಿ ದೇವಿ ಬರಲಿದ್ದು, ಮುಂದಿನ ಭವಿಷ್ಯವನ್ನು ಹೇಳುತ್ತಾಳೆ. ಕನಸಿನಲ್ಲಿ ಬಂದ ದೇವಿ 9 ಜನ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಳು. ಆದರೆ, ಕೊನೆಗೆ ಇಬ್ಬರಿಗೆ ಸಿಎಂ ಸ್ಥಾನ ನೀಡಲು ಪ್ರೇರಣೆ ನೀಡಿದ್ದಳು. ಆಗ ನಾನು ಡಿಕೆ ಶಿವಕುಮಾರ್ ಅವರಿಗೆ ಹೂವಿನ ಹಾರ ಹಾಕು ಅಂದೆ. ಆದರೆ, ಸಿದ್ದರಾಮಯ್ಯ ಅವರಿಗೆ ಹಾರ ಹಾಕಿದ್ದಳು. 50 - 50 ಅಧಿಕಾರ ಎಂದು ಸೂಚನೆ ನೀಡಿದ್ದಳು. ಮೊದಲನೇ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಎರಡನೇ ಅವಧಿಗೆ ಡಿಕೆ ಶಿವಕುಮಾರ್ ಸಿಎಂ ಆಗುವ ಕಾಲ ಬಂದಿದೆ " ಎಂದು ಹೇಳಿದ್ದಾರೆ.
ಈ ಹಿಂದೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಹಾದೇವಪ್ಪ ಪೂಜಾರಿ ಭವಿಷ್ಯ ನುಡಿದಿದ್ದರು. ಅದು ನಿಜವಾಗಿತ್ತು. ಅಷ್ಟೇ ಅಲ್ಲದೇ ಡಿಕೆ ಶಿವಕುಮಾರ್ ಅವರು ವಿವಿಧ ಪ್ರಕರಣಗಳಲ್ಲಿ ಐಟಿ, ಇಡಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾಗ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಆ ಬಳಿಕ ಅವರಿಗೆ ಒಳ್ಳೆಯದಾಗಿತ್ತು ಎಂದು ಅಲ್ಲಿ ಭಕ್ತಾಧಿಗಳು ಹೇಳುತ್ತಾರೆ.
ಇತ್ತ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ 4 ತಿಂಗಳಾಗಿವೆ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆ ಸಿಎಂ ಕುರ್ಚಿ ಹಂಚಿಕೆ 50-50 ಅಂದರೂ ಇನ್ನು ಒಂದು ವರ್ಷ ಬಾಕಿ ಇದೆ. ಆದರೆ, ಈ ನಡುವೆ ಸಿಎಂಗೆ ಮುಡಾ ಹಗರಣದ ಆರೋಪ ಎದುರಾಗಿದೆ. ಈ ಬೆನ್ನೆಲ್ಲೆ ದೇವರ ಹಾಗೂ ಪೂಜಾರಿಗಳ ಭವಿಷ್ಯವಾಣಿಗಳು ಚರ್ಚೆಗೆ ಬಂದಿವೆ.
ಈ ಹಿಂದೆ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿ ದೇವಸ್ಥಾನಕ್ಕೆ ಡಿಕೆ ಶಿವಕುಮಾರ್ ಭೇಟಿ ನೀಡಿದ್ದರು. 2020 ಜನವರಿ 29 ರಂದು ದೇವಸ್ಥಾನದ ಜಾತ್ರೆಗೆ ಆಗಮಿಸಿ ದೇವಸ್ಥಾನದ ಅರ್ಚಕ ಮಹಾದೇವಪ್ಪ ಪೂಜಾರಿ ಅವರ ಮೂಲಕ ಪೂಜೆ ಮಾಡಿ, ಸಂಕಷ್ಟದಿಂದ ಡಿಕೆ ಶಿವಕುಮಾರ್ ಪಾರಾಗಿದ್ದರು. ಅದೆ ರೀತಿ ದೇವಿಯ ಕೃಪೆಯಿಂದಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಡಿಸಿಎಂ ಸ್ಥಾನ ಒಲಿದಿದೆ ಎಂಬ ನಂಬಿಕೆ ಇದೆ.