ಕರ್ನಾಟಕ

ತಿಹಾರ್ ಜೈಲಿಗೆ ಹೋಗಿ ಬಂದ ಡಿಕೆಶಿ ನಮಗೆ ನೀತಿ ಪಾಠ ಹೇಳೋದು ಬೇಡ ; ಶಾಸಕ ಸುರೇಶ್ ಗೌಡ

ಕೋಟಿ ಕೋಟಿ ಲೂಟಿ ಹೊಡೆದು ತಿಹಾರ್ ಜೈಲಿಗೆ ಹೋಗಿ ಬಂದ ಡಿಕೆಶಿ ನಮಗೆ ನೀತಿ ಪಾಠ ಹೇಳೋದು ಬೇಡ ಎಂದು ಶಾಸಕ ಸುರೇಶ್ ಗೌಡ ಕಿಡಿಕಾರಿದ್ದಾರೆ.

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿರೋಧಿ ಹೋರಾಟಗಾರರು ಬ್ಲಾಕ್ ಮೇಲ್ ಮಾಡುತಿದ್ದಾರೆ ಎಂದು ಡಿಸಿಎಂ ಡಿಕೆಶಿ ಹೇಳಿರೋದು ತುಮಕೂರು ಜಿಲ್ಲೆಯಲ್ಲಿ ಇನ್ನಷ್ಟು ಕಿಚ್ಚು ಹೆಚ್ಚಿಸಿದೆ. ಡಿಕೆಶಿ ಹೇಳಿಕೆಗೆ ಪಾದಯಾತ್ರಿಗಳು ರೊಚ್ಚಿಗೆದ್ದಿದ್ದಾರೆ. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸುರೇಶ್, ವೈಕೆ ರಾಮಯ್ಯನವರು ಹೋರಾಟ ಮಾಡಿ ಹೇಮಾವತಿ ನೀರು ತಂದಾಗ ಡಿಕೆಶಿ ಹುಟ್ಟೇ ಇರಲಿಲ್ಲ ಎಂದು ಟಾಂಗ್ ಕೊಟ್ಟರು.

ಕೋಟಿ ಕೋಟಿ ಲೂಟಿ ಹೊಡೆದು ತಿಹಾರ್ ಜೈಲಿಗೆ ಹೋಗಿ ಬಂದ ಡಿಕೆಶಿ ನಮಗೆ ನೀತಿ ಪಾಠ ಹೇಳೋದು ಬೇಡ ಎಂದು ಶಾಸಕ ಸುರೇಶ್ ಗೌಡ ಕಿಡಿಕಾರಿದ್ದಾರೆ.