ನಾನು 107 ಕೆರೆ ತುಂಬಿಸಿದ್ದೆ ಎಂದು ಹೇಳಿಕೆ ನೀಡಿದ್ದ ಹೆಚ್.ಡಿ.ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಕೆರೆ ತುಂಬಿಸಿದ್ದು ಸಿ.ಪಿ.ಯೋಗೇಶ್ವರ್. ನಮ್ಮ ಕಾಲದಲ್ಲೂ ಕೆರೆ ತುಂಬಿಸುವ ಕೆಲಸ ಆಗಿದೆ. ಇವರು ಗೆದ್ರು, ಇವರ ಧರ್ಮಪತ್ನಿ ಗೆದ್ರು...ಆದರೂ ಏನು ಕೆಲಸ ಮಾಡಿದ್ದಾರೆ ಇವರು. ಎನ್.ಡಿ.ಎ ಮೇಲೆ ನಂಬಿಕೆ ಇಲ್ಲದೇ ಸಿಪಿವೈ ಕಾಂಗ್ರೆಸ್ ಗೆ ಬಂದಿದ್ದು. ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಗೆ ಬಂದ್ರು. ಕಾಂಗ್ರೆಸ್ ನಿಂದ ಈಗ ಅಭ್ಯರ್ಥಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ನಮ್ಮ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಇದೆ. ಹೇಳಿರುವ ಐದು ಗ್ಯಾರಂಟಿಗಳನ್ನು ಈಡೇರಿಸುವ ಕೆಲಸ ಮಾಡಿದ್ದಾರೆ. ಜನರ ಸೇವರ ಮಾಡಲು ಬದ್ಧರಾಗಿದ್ದೇವೆ. ನಮ್ಮ ಗ್ಯಾರೆಂಟಿಗಳು ಜನರ ಮತ್ತು ಯುವಕರ ಪರ ಇವೆ
ರಾಜ್ಯದ ಗ್ಯಾರೆಂಟಿಗಳು ದೇಶಕ್ಕೆ ಮಾದರಿಯಾಗಿವೆ ಎಂದು ಹೇಳಿದ್ದಾರೆ.