ಪ್ರಯಾಗ್ ರಾಜ್‌ನಲ್ಲಿ ಮಹಾ ಕುಂಭಮೇಳ ನಡೀತಿದೆ. ಪ್ರಪಂಚದಾದ್ಯಂತ ಭಕ್ತಕೋಟಿ ಪ್ರಯಾಗ್ ರಾಜ್‌ಗೆ ಸಾಗರದಂತೆ ಹರಿದು ಬರುತ್ತಿದೆ. ಈ ನಡುವೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರಯಾಗರಾಜ್ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಭದ ಫೋಟೋಗಳನ್ನ ಶೇರ್ ಮಾಡಿದೆ.

ಇಸ್ರೋ EOS-04 (RISAT-1A) ‘C’ ಬ್ಯಾಂಡ್ ಮೈಕ್ರೋವೇವ್ ಉಪಗ್ರಹದಿಂದ ಮಹಾಕುಂಭದ ಅತ್ಯದ್ಭುತ ಫೋಟೋವನ್ನ ತೆಗೆದಿದ್ದು, ತ್ರಿವೇಣಿ ಸಂಗಮದ ಬಳಿ ಕುಂಭಕ್ಕಾಗಿ ನಿರ್ಮಿಸಲಾಗಿರುವ ಬೃಹತ್ಮೂ ಲಸೌಕರ್ಯಗಳನ್ನ ಈ ಫೋಟೋದಲ್ಲಿ ನೋಡಬಹುದಾಗಿದೆ.

144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭಮೇಳ ಜನವರಿ 13 ರಿಂದ ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿದ್ದು, ಫೆಬ್ರವರಿ 26 ರವರೆಗೆ 45 ದಿನಗಳ ಕಾಲ ನಡೆಯಲಿದೆ.