ಸ್ಪೆಷಲ್ ಸ್ಟೋರಿ

ಬೇಡಿದ್ದೆಲ್ಲಾ ಕೊಡುವ ಕಾರ್ಯಸಿದ್ಧಿ ಆಂಜನೇಯನ ಮಹಿಮೆ ಏನು ಗೊತ್ತಾ..?

ಜೈ ಹನುಮಾನ್, ಜೈ ಭಜರಂಗಿ ಜೈ ಮಾರುತಿ ರಕ್ಕಸ ರಾಕ್ಷಸ ರಾವಣನ್ನ ಲಂಕೆಗೆ ಬೆಂಕಿ ಇನ್ನಿವನು ಜಗನ್ ಮಾತೆ ಸೀತಾ ದೇವಿಯನ್ನೇ ರಕ್ಕಸ ಮುಷ್ಟಿಯಿಂದ ರಕ್ಷಿಸಿದವನು ಈ ನಮ್ಮ ಮಾರುತಿ ಪುರಾಣದಿಂದ ಕಲಿಯುಗದಲ್ಲಿ ಈ ಮಾರುತಿ ಮಹಿಮೆ ಸದಾ ಕಾಲಕ್ಕೂ ಅಚ್ಚ ಹಸಿರಾಗಿದೆ.

ಕಾರ್ಯಸಿದ್ಧಿ ಆಂಜನೇಯ..ಈ ಮಾರುತಿ ಮಹಿಮೆ ಬೆಂಗಳೂರಿನ ಜನರಿಗೆ ಬಹಳ ಚೆನ್ನಾಗಿ ಗೊತ್ತಿದೆ. ಹೆಸರೇ ಹೇಳಿದಂತೆ ಕೇಳಿದ್ದನ್ನೆಲ್ಲಾ ಸಿದ್ಧಿಸುವ ಆಂಜನೇಯನೇ, ಕಾರ್ಯಸಿದ್ಧಿ ಆಂಜನೇಯ. ಅಚ್ಚುಕಟ್ಟಾಗಿ  ವ್ರತ  ಪಾಲಿಸುವ ಎಲ್ಲಾ ಭಕ್ತನ ಆಸೆ ಈಡೇರಿಸುವುದೇ ಕಾರ್ಯಸಿದ್ಧಿ  ಆಂಜನೇಯನ ವಿಶೇಷತೆ.

ಈ ವ್ರತ ಮಾಡುವುದು ಹೇಗೆ..?

ಖುದ್ದು ಸೀತಾ ಮಾತೆ ಜಪಿಸಿದಂತಹ ಮಂತ್ರವನ್ನು ಹೇಳಿ ಕಾರ್ಯಸಿದ್ಧಿ ಆಂಜನೇಯನಾ ವ್ರತ ಆರಂಭವಾಗುತ್ತದೆ.  ತಮ್ ಆಸೆ ಈಡೇರಿಸಿಕೊಳ್ಳಲು ಭಕ್ತಾಧಿಗಳು ಪೂರ್ಣಫಲವಾದ ತೆಂಗಿನ ಕಾಯಿ ಕಾರ್ಯಸಿದ್ಧಿ ಅಂಜನೇಯ ಸ್ವಾಮಿಗೆ ಸಮರ್ಪಿಸುತ್ತಾರೆ. 16 ದಿನಗಳ ವುತ ಕೈಗೊಳ್ಳುತ್ತಾರೆ. ಈ ಮೂಲಕ ಮಧ್ಯ, ಮಾಂಸಹಾರಕ್ಕೆ ಬ್ರೇಕ್ ಹಾಕಬೇಕಾಗುತ್ತದೆ.ಹಾಗೇ 16 ದಿನದಲ್ಲಿ, 4 ಬಾರಿ ದೇಗುಲಕ್ಕೆ ಭೇಟಿ ನೀಡಿ ಆಂಜನೇಯ ಸ್ವಾಮಿಗೆ ಪ್ರತಿ ಬಾರಿ 16 ಪ್ರದಕ್ಷಿಣೆಯಂತೆ ಬರೋಬ್ಬರಿ 64 ಪುದಕ್ಷಿಣೆಯನ್ನ ವುತದ ಅವಧಿಯಲ್ಲಿ ಪೂರ್ಣಗೊಳಿಸಬೇಕಾಗಿದೆ. ಇನ್ನೂ ಮೊದಲ ದಿನ ದೇವರಿಗೆ ಅರ್ಪಿಸಿದ ಈ ಕಾಯಿಯನ್ನ ೧೬ ದಿನದ ವುತ ಮುಗಿದ ಮೇಲೆ ವಾಪಸ್ ಪಡೆದು ಮನೆಯಲ್ಲಿ ಸಿಹಿ ಪದಾರ್ಥ ಮಾಡಿಕೊಂಡು ಹಂಚಿ ತಿನ್ನಬೇಕಿದೆ. ಹೀಗೆ ಹನುಮಂತನ ವುತ ಮಾಡಿದರೆ ವುತ ವೇಳೆ ಇಲ್ಲವೇ ವ್ರತ ಮುಗಿದ ಮೇಲಾದರೂ ದೇವರು ನಿಮ್ಮ ಬೇಡಿಕೆಯನ್ನು ಈಡೇರಿಸುತ್ತಾರೆ.