ಇಷ್ಟುದಿನ ಎಕ್ಸ್ ಪ್ರೆಸ್ ಟ್ರೈನ್, ವಂದೇ ಭಾರತ್ಟ್ರೈನ್ ಬಗ್ಗೆ ನಮಗೆಲ್ಲಾ ಮಾಹಿತಿಯಿತ್ತು. ಈಗ ಭಾರತದ ಅಂಡರ್ವಾಟರ್ ಬುಲೆಟ್ ಟ್ರೈನ್ಗಳ ಸಮಯ ಶುರುವಾಗಿದೆ. ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಭಾರತ ತನ್ನ ಮೊದಲ ಬುಲೆಟ್ ರೈಲು ಸೇವೆ ಪ್ರಾರಂಭಿಸಲು ಸಜ್ಜಾಗಿದೆ. ಅರಬ್ಬಿ ಸಮುದ್ರದ ಅಡಿಯಲ್ಲಿ 21 ಕಿಲೋಮೀಟರ್ ನೀರಿನೊಳಗೆ ಸುರಂಗವನ್ನು ನಿರ್ಮಿಸುವ ಮೂಲಕ, ಭಾರತವು ಅದ್ಭುತವಾದ ಅಂಡರ್ವಾಟರ್ ಬುಲೆಟ್ ಟ್ರೈನ್ ಸಂಪರ್ಕ ವ್ಯವಸ್ಥೆ ಸ್ಥಾಪಿಸಲು ಸಜ್ಜಾಗಿದೆ.
ಈ ಯೋಜನೆಯು ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ ಕಾರಿಡಾರ್ನ ಭಾಗವಾಗಿದ್ದು, ಭಾರತದ ಎರಡು ಪ್ರಮುಖ ನಗರಗಳ ನಡುವಿನ ಪ್ರಯಾಣವನ್ನು ಸುಗಮವಾಗಿಸುವ ಗುರಿಯನ್ನು ಹೊಂದಿದೆ. ಮುಂಬೈ-ಅಹಮದಾಬಾದ್ ಮಾರ್ಗದ ಈ ಹೈಸ್ಪೀಡ್ ರೈಲ್ ಕಾರಿಡಾರ್, ಭಾರತದ ನೀರೊಳಗಿನ ಸುರಂಗ ಬುಲೆಟ್ ಟ್ರೈನ್ ಗಳಲ್ಲಿ ಒಂದಾಗಿದೆ.
ಎಷ್ಟು ಉದ್ದವಾಗಿದೆ ಗೊತ್ತಾ?
ಈ ಸುರಂಗವು ಅರೇಬಿಯನ್ ಸಮುದ್ರದ ಅಡಿಯಲ್ಲಿ 21 ಕಿಲೋಮೀಟರ್ಗಳಷ್ಟು ಉದ್ದವನ್ನು ಹೊಂದಿದೆ. ಸಂಕೀರ್ಣ ಭೌಗೋಳಿಕ ಪರಿಸ್ಥಿತಿಗಳನ್ನು ನ್ಯಾವಿಗೇಟ್ ಮಾಡುವ ಮೂಲಕ ಸಮುದ್ರದ ಮೇಲ್ಮೈಯಿಂದ 25 ರಿಂದ 65 ಮೀಟರ್ ಆಳದಲ್ಲಿ ನಿರ್ಮಾಣ ನಡೆಯುತ್ತಿದೆ.
ಬೃಹತ್ ಯಂತ್ರಗಳು:
5-6 ಮೀಟರ್ಗಳ ಕಟ್ಟರ್ ಹೆಡ್ಗಳನ್ನ ಹೊಂದಿರುವ ಚಿಕ್ಕ TBM ಗಳನ್ನು ಬಳಸುವ ಮೆಟ್ರೋ ಸುರಂಗಗಳಿಗಿಂತ ಭಿನ್ನವಾಗಿ, ಈ ಯೋಜನೆಗೆ 13.1-ಮೀಟರ್ ಕಟ್ಟರ್ ಹೆಡ್ಗಳೊಂದಿಗೆ ಬೃಹತ್ ಟನಲ್ ಬೋರಿಂಗ್ ಯಂತ್ರಗಳು (TBMs) ಅಗತ್ಯವಿದೆ.
ಪ್ರಯಾಣದ ಸಮಯ ಎಷ್ಟಿರುತ್ತದೆ?
ಮೂರು TBMಗಳು 16 ಕಿಲೋಮೀಟರ್ಗಳ ಮೂಲಕ ಸುರಂಗವನ್ನ ನಿರ್ಮಿಸಲಾಗುತ್ತದೆ. ಆದರೆ ಉಳಿದ 5 ಕಿಲೋಮೀಟರ್ ಗಳು ಹೊಸ ಆಸ್ಟ್ರಿಯನ್ ಟನೆಲಿಂಗ್ ವಿಧಾನವನ್ನು (NATM) ಬಳಸಲಾಗಿದೆ. ಒಮ್ಮೆ ಪೂರ್ಣಗೊಂಡ ನಂತರ, ಸುರಂಗವು ಬುಲೆಟ್ ಟ್ರೈನ್ ಗಂಟೆಗೆ 320 ಕಿಲೋಮೀಟರ್ ವೇಗವನ್ನು ತಲುಪಲು ಅನುವು ಮಾಡಿಕೊಡುತ್ತದೆ, ಇದು ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.