ವೈರಲ್

ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧ, ಸಂಸಾರ ಉಳಿಸಿಕೊಳ್ಳಲು ಆತ ಮಾಡಿದ್ದೇನು ಗೊತ್ತಾ? ಸ್ನೇಹ v/s ಸಂಸಾರ..!

ಈತ ತನ್ನ ಸ್ನೇಹಿತರ ಜೊತೆ ಚಿನಕುರುಳಿ ಗ್ರಾಮದ ಕುಮಾರ್ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.

ನಾಗಮಂಗಲ: ತನ್ನ ಪತ್ನಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಕ್ಕಾಗಿ ಜೊತೆಗಿದ್ದ ಸ್ನೇಹಿತನನ್ನೆ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆದಿದೆ.

ನಾಗಮಂಗಲದ ತಿರುಮಲಾಪುರ ಗ್ರಾಮದ ಅರವಿಂದ್ (23) ಕೊಲೆಯಾದ ಯುವಕ. ಈತ ತನ್ನ ಸ್ನೇಹಿತರ ಜೊತೆ ಚಿನಕುರುಳಿ ಗ್ರಾಮದ ಕುಮಾರ್ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ತಡ ರಾತ್ರಿ  ಸ್ನೇಹಿತರ ಜೊತೆ ಮದ್ಯ ಸೇವಿಸಿ ಮಲಗಿದ್ದ ಅರವಿಂದ್ ಮೇಲೆ ಇಬ್ಬರು ಸ್ನೇಹಿತರು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಆತನ ಜೊತೆಯಲ್ಲಿ ಮಲಗಿದ್ದ ಸ್ನೇಹಿತರಾದ ವಿಜಯ್ ಹಾಗು ಏಳುಮಲೈ ಎಂಬುವರಿಂದ ಹತ್ಯೆ ನೆಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಪಾಂಡವಪುರ ಪೊಲೀಸರ ಭೇಟಿ ನೀಡಿ, ಪರಿಶಿಲನೆ ನೆಡೆಸಿ. ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.