ಉತ್ತರಪ್ರದೇಶ : ಸಾರ್ವಜನಿರು ಹೆಚ್ಚಾಗಿ ಪ್ರಯಾಣಿಸೋದು ಬಸ್ಗಳಲ್ಲಿ. ಈ ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸೀಟ್ ಹಿಡಿಯೋದು ಅಂದ್ರೆ ಒಂದುರೀತಿಯ ಸಾಹಸ ಮಾಡಿದ ಹಾಗೆ. ಕೆಲವರು ಕರ್ಚೀಫ್ ಹಾಕಿ ಸೀಟ್ ಹಿಡಿದರೆ, ಮತ್ತೆ ಕೆಲವರು ವಾಟರ್ ಬಾಟಲ್ ಹಾಕಿ ಸೀಟ್ ರಿಸರ್ವ್ ಮಾಡಿ ಬಿಡ್ತಾರೆ. ಆದರೆ ಮತ್ತೆ ಕೆಲವರಿರ್ತಾರೆ, ಇವರಂತೂ ಒಂದ್ ಸಾರಿ ನಾನು ಜಾಗ ಹಿಡಿಯಲೇ ಬೇಕು ಅಂತಾ ಡಿಸೈಡ್ ಮಾಡಿದ ಮೇಲೆ ಜಾಗ ಬಿಡುವ ಮಾತೇ ವಿರುವುದಿಲ್ಲ.
ಹೌದು, ಬಸ್ನಲ್ಲಿ ಸೀಟು ಹಿಡಿಯಲು ಪ್ರಯಾಣಿಕರು ಮಾಡುವ ಅದ್ವಾನಗಳು ಆಗಾಗ ಜಾಲತಾಣಗಳಲ್ಲಿ ವೈರಲ್ ಆಗ್ತಾನೆ ಇರುತ್ವೆ. ಇದೀಗ ಇಂತಹದ್ದೆ ಒಂದು ಘಟನೆ ನಡೆದಿದೆ. ಡೋರ್ನಿಂದ ಬಸ್ ಹತ್ತಿದ್ರೆ ನಂಗೆ ಸೀಟ್ ಸಿಗೋದು ಕಷ್ಟ ಅಂತಾ, ಮಹಿಳೆಯೊಬ್ಬರು ಕಿಟಕಿಯಿಂದಾನೆ ನುಗ್ಗಿ ಬಿಟ್ಟಿದ್ದಾರೆ. ಈ ವಿಡಿಯೋ ಈಗ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಘಟನೆಯನ್ನ ರಣವಿಜಯ್ ಸಿಂಗ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಂಪು ಬಣ್ಣದ ಸೀರೆ ತೊಟ್ಟ ಮಹಿಳೆಯೊಬ್ಬರು ಬಸ್ ಏರಿ ನಿಂತ ದೃಶ್ಯವನ್ನ ಕಂಡ ನೆಟ್ಟಿಗರು ಹೆಣ್ಮಕ್ಳೇ ಸ್ಟ್ರಾಂಗು ಗುರು ಅಂತಾ ಕಮೆಂಟ್ ಮಾಡುತ್ತಿದ್ದಾರೆ.