ಸುರ-ಅಸುರರ ಸಮುದ್ರಮಥನದ ಕಥೆಯನ್ನ ನೀವು ಕೇಳಿರ್ತೀರಿ. ಸಮುದ್ರ ಮಥನದ ಸಂದರ್ಭದಲ್ಲಿ ಜನಿಸಿದವರು ಯಾಱರು ಎಂಬುದನ್ನ ಎಲ್ಲರೂ ನೆನಪಿನಲ್ಲಿಟ್ಟುಕೊಂಡಿರ್ತೀರಿ. ಕಾಮಧೇನು, ಕಲ್ಪವೃಕ್ಷ, ಲಕ್ಷಿ ಹೀಗೆ ಹತ್ತಾರು ದೇವತಾ ಗುಣಗಳಿರುವ ಪ್ರಾಣಿಗಳು, ದೇವತೆಗಳು ಉದ್ಭವಿಸ್ತಾರೆ. ಹೀಗೆ ಉದ್ಭವಿಸಿದವರ ಪೈಕಿ ಅಪ್ಸರಸೆಯರೂ ಕೂಡ ಇದ್ದಾರೆ. ರಂಬೆ, ಊರ್ವಶಿ, ಮೇನಕೆ ಎಂಬ ದೇವಲೋಕದ ರೂಪಸಿಯರು.
ನಿಮಗೆ ಗೊತ್ತಾ ಸಮುದ್ರಮಥನದಲ್ಲಿ ರೂಪಸಿಯರ ದಂಡೇ ಉದ್ಬವಿಸಿದೆ. ಅವರ ಹೆಸರನ್ನ ಕೇಳಿದ್ರೆ ನೀವೇ ಮೂಗಿನ ಮೇಲೆ ಬೆರಳಿಟ್ಕೊಳ್ತಿರಾ! ಹೌದು, ಹಾಗಾದ್ರೆ ದೇವಲೋಕದ ಅಪ್ಸರೆಯರ ಒಂದೊಂದೇ ಹೆಸರನ್ನ ಹೇಳ್ತೀವಿ ಕೇಳಿ. ಅನೂಚಾನೆ, ಅನವದ್ಯೆ, ಗುಣ ಮುಖ್ಯೆ, ಗುಣಾವರೆ, ಅಧಿಕೆ, ಸೋಮೆ, ಮಿಶ್ರಕೇಶಿ, ಅಲುಂಬುಸೆ, ಮರೀಚಿ, ಶುಚಿಕೆ, ವಿದ್ಯುತ್ಪರ್ಣೆ, ತಿಲೋತ್ತಮೆ, ಅಂಬಿಕೆ, ಲಕ್ಷಣೆ, ಕ್ಷೇಮೆ, ದೇವಿ, ರಂಭೆ, ಮನೋರಮೆ, ಅಸಿತೆ, ಸುಬಾಹು, ಸುಪ್ರಿಯೆ, ವಪುಸ್ಸು, ಪುಂಡರೀಕೆ, ಸುಗಂಧೆ, ಸುರಸೆ, ಪ್ರಮಾಥಿನಿ, ಸೌಮ್ಯೆ, ಶಾರದ್ವತೆ, ಮೇನಕೆ, ಸಹಜನ್ಯೆ, ಕರ್ಣಿಕೆ, ಪುಂಜಿಕಸ್ಥಲೆ, ಋತುಸ್ಥಲೆ, ಘೃತಾಚಿ, ವಿಶ್ವಾಚಿ, ಪೂರ್ವಚಿತ್ತ, ಉಮ್ಲೋಚೆ,ಪ್ರಮ್ಲೋಚೆ, ಊರ್ವಶಿ ಹೀಗೆ ಪಟ್ಟಿ ಮಾಡ್ತಾ ಹೋದ್ರೆ ದಿನವೇ ಸಾಲಲ್ಲ.