ವೈರಲ್

ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ವೈದ್ಯೆ..!

ಅಪಘಾತದಲ್ಲಿ ಗಾಯಗೊಂಡು ನಿಧನ ಹೊಂದಿದ ವೈದ್ಯೆಯೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡುವ ಮೂಲಕ, ಮಾದರಿಯಾಗಿದ್ದಾರೆ. ಬೆಂಗಳೂರು ಮೂಲದ ವೈದ್ಯೆ ಸಂದ್ಯಾ, ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರತಿನಿತ್ಯ ಬಸ್‌ನಲ್ಲೇ ಪ್ರಯಾಣಿಸುತ್ತಿದ್ದ ಸಂಧ್ಯಾಗೆ, ಡಿಸೆಂಬರ್‌ 6ರಂದು,  ಬಸ್‌ ಮಿಸ್‌ ಆಗಿತ್ತು. ಹೀಗಾಗಿ ಆಕೆ ತಂದೆಯೊಂದಿಗೆ ಬೈಕ್‌ನಲ್ಲಿ ಕಾಲೇಜಿಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಹಂಪ್‌ ದಾಟುವ ವೇಳೆ, ಬೈಕ್‌ನಿಂದ ಬಿದ್ದು ಸಂಧ್ಯಾ ಅವರ ತಲೆಗೆ ಗಾಯವಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಂಧ್ಯಾ ಸಾವನ್ನಪ್ಪಿದ್ದಾರೆ.