ವೈರಲ್

ವೈದ್ಯರ ನಿರ್ಲಕ್ಷ್ಯ : ಓವರ್ ಡೋಸ್ ಇಂಜೆಕ್ಷನ್ ಗೆ ಬಾಲಕ ಸಾವು

ಸೋನೇಶ್ ಎಂಬ ಬಾಲಕ ಕಳೆದ ನಾಲ್ಕು ದಿನಗಳಿಂದ ತೀವ್ರ ಜ್ವರದಿದ ಬಳಲುತ್ತಿದ್ದನು. ಇದೇ ವೇಳೆ ಪೋಷಕರು ಅಜ್ಜಂಪುರದ ಕ್ಲಿನಿಕ್ ಗೆ ಕರೆದೊಯ್ದಿದ್ದಾರೆ. ವರುಣ್ ಎಂಬ ವೈದ್ಯ ಬಾಲಕನಿಗೆ ಓವರ್ ಡೋಸ್ ಇಂಜೆಕ್ಷನ್ ನೀಡಿದ್ದಾರೆ.

ಚಿಕ್ಕಮಗಳೂರು :  ವೈದ್ಯರ ನಿರ್ಲಕ್ಷ್ಯದಿಂದ 7 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ವರುಣ್ ಎಂಬ ವೈದ್ಯ ಓವರ್ ಡೋಸ್ ಇಂಜೆಕ್ಷನ್ ನೀಡದ ಬಳಿಕ ಬಾಲಕ ಸಾವನ್ನಪ್ಪಿದ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ. ಸೋನೇಶ್ (7) ವರ್ಷದ ಬಾಲಕ ಮೃತಪಟ್ಟಿದ್ದಾನೆ. 

ಸೋನೇಶ್ ಎಂಬ ಬಾಲಕ ಕಳೆದ ನಾಲ್ಕು ದಿನಗಳಿಂದ ತೀವ್ರ ಜ್ವರದಿದ ಬಳಲುತ್ತಿದ್ದನು. ಇದೇ ವೇಳೆ ಪೋಷಕರು ಅಜ್ಜಂಪುರದ ಕ್ಲಿನಿಕ್ ಗೆ ಕರೆದೊಯ್ದಿದ್ದಾರೆ. ವರುಣ್ ಎಂಬ ವೈದ್ಯ ಬಾಲಕನಿಗೆ ಓವರ್ ಡೋಸ್ ಇಂಜೆಕ್ಷನ್ ನೀಡಿದ್ದಾರೆ. ಇಂಜಕ್ಷನ್ ನೀಡಿದ ಬಳಿಕ ಬಾಲಕನ ಸೊಂಟದ ಭಾಗದಲ್ಲಿ ಬೊಬ್ಬೆಗಳು ಕಾಣಿಸಿಕೊಂಡಿವೆ. ಗಾಬರಿಗೊಂಡ ಪೋಷಕರು ತಕ್ಷಣ ಆತನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿಂದೆ.