ವೈರಲ್

ಕಾಸ್ಮೆಟಿಕ್ ಸರ್ಜರಿ ವೇಳೆ ವೈದ್ಯರ ಎಡವಟ್ಟು: ಯುವಕ ಸಾವು

ಅರ್ಧ ಗಂಟೆಯಲ್ಲಿ ಮುಗಿಯಬೇಕಿದ್ದ ಈ ಶಸ್ತ್ರಚಿಕಿತ್ಸೆ ಸಂಜೆಯಾದರು ಮುಗಿಯಲಿಲ್ಲ. ಮಾಝಿನ್ ತಾಯಿ ಮತ್ತು ಪತ್ನಿ ಇದರಿಂದ ಸಂಶಯಗೊಂಡು ವೈದ್ಯರನ್ನು ವಿಚಾರಿಸಿದಾಗ ಮಾಝಿನ್ ಆರೋಗ್ಯ ದಲ್ಲಿ ಸ್ವ ಲ್ಪ ಏರುಪೇರು ಆಗಿದೆ ಎಂದು ವೈದ್ಯರು ತಿಳಿಸಿದ್ದು, ತಕ್ಷಣ ಅಲ್ಲಿಂದ ಕೋಡಿಯಾಲ್ ಬೈಲ್ ನ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ.

ಮಂಗಳೂರು : ಯುವಕನೋರ್ವ ಎದೆಯ ಭಾಗ ಉಬ್ಬಿದ ಹಿನ್ನೆಲೆ, ನಗರದ ಕಂಕನಾಡಿಯ ಬೆಂದೂರ್ ವೆಲ್ ನಲ್ಲಿರುವ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ ಪ್ಲಾಂಟ್ ಕ್ಲಿನಿಕ್ ನಲ್ಲಿ ದಾಖಲಾಗಿದ್ದರು. ವೈದ್ಯರ ನಿರ್ಲಕ್ಷ್ಯದಿಂದ ಯುವಕ ಸಾವನ್ನಪ್ಪಿದ್ದಾನೆ.

ಉಳ್ಳಾಲದ ಅಕ್ಕರೆಕೆರೆ ನಿವಾಸಿ ಮುಹಮ್ಮದ್ ಮಾಝಿನ್ (32) ಎಂಬಾತ ಸರ್ಜರಿ ವೇಳೆ ಮೃತಪಟ್ಟಿದ್ದು , ವೈದ್ಯ ರ ನಿರ್ಲಕ್ಷ್ಯ ವೇ ಇದಕ್ಕೆ ಕಾರಣ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಅರ್ಧ ಗಂಟೆಯಲ್ಲಿ ಮುಗಿಯಬೇಕಿದ್ದ ಈ ಶಸ್ತ್ರಚಿಕಿತ್ಸೆ ಸಂಜೆಯಾದರು ಮುಗಿಯಲಿಲ್ಲ. ಮಾಝಿನ್ ತಾಯಿ ಮತ್ತು ಪತ್ನಿ ಇದರಿಂದ ಸಂಶಯಗೊಂಡು ವೈದ್ಯರನ್ನು ವಿಚಾರಿಸಿದಾಗ ಮಾಝಿನ್ ಆರೋಗ್ಯ ದಲ್ಲಿ ಸ್ವ ಲ್ಪ ಏರುಪೇರು ಆಗಿದೆ ಎಂದು ವೈದ್ಯರು ತಿಳಿಸಿದ್ದು,  ತಕ್ಷಣ ಅಲ್ಲಿಂದ ಕೋಡಿಯಾಲ್ ಬೈಲ್ ನ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಇದೇ ವೇಳೆ ಪರೀಕ್ಷಿಸಿದ ವೈದ್ಯರು ಮಾಝಿನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.