ಡಿಸಿಎಂ ಡಿ.ಕೆ. ಶಿವಕುಮಾರ್ ಇಂದು ಬಹಿರಂಗವಾಗಿಯೇ ಜೆಡಿಎಸ್ ಕಾರ್ಯಕರ್ತರಿಗೆ ಭರ್ಜರಿ ಆಫರ್ ನೀಡಿದ್ದಾರೆ.. ಪಾಪ.. ಜೆಡಿಎಸ್ ಕಾರ್ಯಕರ್ತರಿಗೆ ಹೇಳಬೇಕು.. ಅವರು ಟೈಮ್ ವೆಸ್ಟ್ ಮಾಡಿಕೊಳ್ಳುವುದು ಬೇಡ.. ಬೆಂಗಳೂರು ದಕ್ಷಿಣ ಜಿಲ್ಲೆಯಾಗುತ್ತಿದೆ.. ಒಬ್ಬ ವ್ಯಕ್ತಿಗೋಸ್ಕರ ಇಡೀ ಜೆಡಿಎಸ್ ಪಕ್ಷವನ್ನು ಬಲಿಕೊಟ್ಟಿದ್ದಾರೆ.. ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ.. ನಾನು,, ಸಿದ್ದರಾಮಯ್ಯ ನಿಮ್ಮ ಜೊತೆಗೆ ನಿಲ್ಲುತ್ತೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್‌ಗೆ ಬರುವಂತೆ ಆಹ್ವಾನ ನೀಡಿದ್ದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ 2 ಬಾರಿ ಸಿಎಂ ಆದರೂ ದೇವಾಲಯ, ಶಾಲೆ ಕಟ್ಟಿಸಲಿಲ್ಲ.. ಡಿ.ಕೆ. ಸುರೇಶ್ ಹಾಗೂ ನನ್ನ ಬಗ್ಗೆ ತುಂಬಾ ಕೀಳಾಗಿ ಮಾತನಾಡಿದ್ದಾರೆ. ಆದರೆ, ನಾವು ಏನನ್ನೂ ಮಾತನಾಡಿಲ್ಲ ಎಲ್ಲರಿಗೂ ಈ ಚನ್ನಪಟ್ಟಣವೇ ಉತ್ತರ ನೀಡಲಿದೆ ಎಂದು ಗುಡುಗಿದ್ದಾರೆ..