ವಿದೇಶ

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಪದಗ್ರಹಣ

ಟ್ರಂಪ್‌ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಅಧ್ಯಕ್ಷ ಜೋ ಬೈಡನ್‌, ಮಾಜಿ ಅಧ್ಯಕ್ಷರಾದ ಬರಾಕ್‌ ಒಬಾಮಾ, ಜಾರ್ಜ್‌ ಬುಶ್‌, ಸ್ಪೇಸ್‌ ಎಕ್ಸ್‌ ಮುಖ್ಯಸ್ಥ ಎಲಾನ್‌ ಮಸ್ಕ್‌, ಮೆಟಾ ಮುಖ್ಯಸ್ಥ ಮಾರ್ಕ್‌ ಜುಕರ್‌ಬರ್ಗ್‌ ಸೇರಿ ಅನೇಕರು ಭಾಗಿಯಾಗಿದ್ದರು

ವಾಷಿಂಗ್ಟನ್:‌ ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಪಟ್ಟಕ್ಕೇರಿದ್ದಾರೆ. ಕ್ಯಾಪಿಟಲ್ ರೋಟುಂಡಾದಲ್ಲಿ ಟ್ರಂಪ್‌ ಅವರಿಗೆ ಅಮೆರಿಕದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಾನ್‌ ರಾಬರ್ಟ್ಸ್‌ ಅವರು ಪ್ರಮಾಣ ವಚನ ಭೋಧಿಸಿದ್ದು, ಆ ಮೂಲಕ ಟ್ರಂಪ್‌ ವಿಶ್ವದ ದೊಡ್ಡಣನ ಅಧ್ಯಕ್ಷ ಗಾದಿಗೆ ಏರಿದ್ದಾರೆ.

ಟ್ರಂಟ್‌ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೇರುತ್ತಿದ್ದಂತೆ ಕ್ಯಾಪಿಟಲ್ ರೋಟುಂಡಾ ಕಟ್ಟಡದ ಸುತ್ತಲೂ ನೆರೆದಿದ್ದ ಸಾವಿರಾರು ಅಭಿಮಾನಿಗಳು ಹರ್ಷೋದ್ಘಾರವನ್ನೇ ಮೊಳಗಿಸಿದರು.. ಇನ್ನೂ ಟ್ರಂಪ್‌ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಅಧ್ಯಕ್ಷ ಜೋ ಬೈಡನ್‌, ಮಾಜಿ ಅಧ್ಯಕ್ಷರಾದ ಬರಾಕ್‌ ಒಬಾಮಾ, ಜಾರ್ಜ್‌ ಬುಶ್‌,  ಸ್ಪೇಸ್‌ ಎಕ್ಸ್‌ ಮುಖ್ಯಸ್ಥ ಎಲಾನ್‌ ಮಸ್ಕ್‌, ಮೆಟಾ ಮುಖ್ಯಸ್ಥ ಮಾರ್ಕ್‌ ಜುಕರ್‌ಬರ್ಗ್‌, ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಸೇರಿದಂತೆ  ಹಲವು ಗಣ್ಯರು, ದೇಶ-ವಿದೇಶಗಳ ರಾಯಬಾರಿಗಳು ಸೇರಿ ಅನೇಕರು ಭಾಗಿಯಾಗಿದ್ದರು.