ಕ್ರೀಡೆಗಳು

ಡ್ರೆಸ್ಸಿಂಗ್‌ ರೂಮ್‌ ಗುಸುಗುಸು.. ಗೌತಮ್‌ ಗಂಭೀರ್ ಗರಂ..!

ಇದು ತಂಡದ ಆಟ, ಮತ್ತು ಪ್ರತಿಯೊಬ್ಬರೂ ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ಆಟಗಾರ ಮತ್ತು ಕೋಚ್ ನಡುವಿನ ಚರ್ಚೆಗಳು ಅವರ ನಡುವೆ ಉಳಿಯಬೇಕು. ಡ್ರೆಸ್ಸಿಂಗ್ ರೂಮ್‌ನಲ್ಲಿ ಯಾವುದೇ ಸಂಭಾಷಣೆಗಳು ಡ್ರೆಸ್ಸಿಂಗ್ ರೂಮ್‌ನಲ್ಲಿ ಉಳಿಯಬೇಕು ಎಂದಿದ್ದಾರೆ.

ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯ ಕೊನೆಯ ಟೆಸ್ಟ್‌ಗೆ ಟೀಂ ಇಂಡಿಯಾ ಸಿದ್ಧವಾಗ್ತಿದೆ. ಟ್ರೋಫಿಯಲ್ಲಿ 2-1ರಲ್ಲಿ ಹಿನ್ನಡೆ ಸಾಧಿಸಿರುವ ಭಾರತಕ್ಕೆ ಆಸ್ಟ್ರೇಲಿಯಾದ ಸಿಡ್ನಿ ಟೆಸ್ಟ್‌ ಪ್ರಮುಖವಾಗಿದೆ. ಗೆಲ್ಲುವ ಮೂಲಕ ಟೆಸ್ಟ್‌ ಸರಣಿ ಸಮಬಲ ಮಾಡಿಕೊಳ್ಳಬೇಕಾಗಿದೆ. ಈ ಮಧ್ಯೆ ಭಾರತ ಕ್ರಿಕೆಟ್‌ ತಂಡದ ʼಡ್ರೆಸಿಂಗ್‌ ರೂಮ್‌ʼ ಬಗ್ಗೆ ಚರ್ಚೆ ನಡೆಯುತ್ತಿದೆ. ಕೋಚ್‌ ಗೌತಮ್‌ ಗಂಭೀರ್‌ ಮತ್ತು ಆಟಗಾರರ ಮಧ್ಯೆ ಹೊಂದಾಣಿಕೆ ಇಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಕೋಚ್‌ ಗೌತಮ್‌ ಗಂಭೀರ ಪ್ರತಿಕ್ರಿಯೆ ನೀಡಿದ್ದು ಎಲ್ಲವೂ ಸರಿಯಾಗಿಯೇ ಇದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದಿದ್ದಾರೆ. ಟೆಸ್ಟ್ ಪಂದ್ಯವನ್ನು ಗೆಲ್ಲಲು ಸಾಧ್ಯವಾಗುವ ಎಲ್ಲವನ್ನೂ ನಾವು ಆ ಡ್ರೆಸ್ಸಿಂಗ್ ರೂಮ್‌ನಲ್ಲಿ ಹೊಂದಿದ್ದೇವೆ. ತಂಡ ಮೊದಲು. ಇದು ತಂಡದ ಆಟ, ಮತ್ತು ಪ್ರತಿಯೊಬ್ಬರೂ ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ಆಟಗಾರ ಮತ್ತು ಕೋಚ್ ನಡುವಿನ ಚರ್ಚೆಗಳು ಅವರ ನಡುವೆ ಉಳಿಯಬೇಕು. ಡ್ರೆಸ್ಸಿಂಗ್ ರೂಮ್‌ನಲ್ಲಿ ಯಾವುದೇ ಸಂಭಾಷಣೆಗಳು ಡ್ರೆಸ್ಸಿಂಗ್ ರೂಮ್‌ನಲ್ಲಿ ಉಳಿಯಬೇಕು ಎಂದಿದ್ದಾರೆ.