ಕರ್ನಾಟಕ

ಬಿಗ್‌ಬಾಸ್‌ ಸ್ಪರ್ಧಿ ಡ್ರೋನ್‌ ಪ್ರತಾಪ್‌ ಅರೆಸ್ಟ್..!

ಬಿಗ್‌ಬಾಸ್‌ ಖ್ಯಾತಿಯ ಡ್ರೋನ್‌ ಪ್ರತಾಪ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ.

ಬಿಗ್‌ಬಾಸ್‌ ಖ್ಯಾತಿಯ ಡ್ರೋನ್‌ ಪ್ರತಾಪ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸ್‌ ಠಾಣೆಯಲ್ಲಿ, ಮೂವರ ಮೇಲೆ ಎಫ್‌ಐಆರ್‌ ದಾಖಲಾಗಿತ್ತು, ಇದೀಗ ಪ್ರತಾಪ್‌ನ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ರೈತರ ಕೃಷಿ ಹೊಂಡದಲ್ಲಿ ಸೋಡಿಯಂ ಬಾಂಬ್‌ ಬ್ಲಾಸ್ಟ್‌ ಮಾಡಿದ್ದ ಡ್ರೋನ್‌ ಪ್ರತಾಪ್‌, ಯೂಟ್ಯೂಬ್‌ನಲ್ಲಿ ವಿಡಿಯೋ ಅಪ್‌ಲೋಡ್‌ ಮಾಡಿದ್ದರು. ವಿಡಿಯೋ ಆಧರಿಸಿ ಬಿಎನ್ಎಸ್ ಕಾಯ್ದೆ ಸೆಕ್ಷನ್ 176 ಮತ್ತು ಸಿಆರ್‌ಪಿಸಿ 158 ಮತ್ತು ಬಿ, ಹಾಗೂ ಸ್ಪೋಟಕ ವಸ್ತುಗಳ ನಿಯಂತ್ರಣ ಕಾಯ್ದೆ  ಅಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಜನಕಲೋಟಿ ಎಂಬ ಗ್ರಾಮದ ಸರ್ವೇ ನಂ 66/3 ಕೃಷಿ ಹೊಂಡದಲ್ಲಿ, ಪ್ರಯೋಗ ಮಾಡಿದ್ದ ಡ್ರೋನ್‌ ಪ್ರತಾಪ್‌, ಜಮೀನು ಮಾಲೀಕ ಜಿತೇಂದ್ರ ಜೈನ್ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ ವ್ಯಕ್ತಿ ..ಈ ಮೂವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.