ವೈರಲ್

ಜೈಲಿನಿಂದ ರಿಲೀಸ್‌ ಆದ ಡ್ರೋನ್‌ ಪ್ರತಾಪ್..ನನಗೆ ನ್ಯಾಯ ಬೇಕು ಎಂದು ಆಗ್ರಹ..!

9 ದಿನಗಳ ಬಳಿಕ ಡ್ರೋನ್‌ ಪ್ರತಾಪ್‌ ಜೈಲಿನಿಂದ ಹೊರಗೆ ಬಂದಿದ್ದಾರೆ. ಜೈಲಿನಿಂದ ಹೊರಬಂದ ತಕ್ಷಣ ನನಗೆ ನ್ಯಾಯ ಬೇಕು ಎಂದು, ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ.

9 ದಿನಗಳ ಬಳಿಕ ಡ್ರೋನ್‌ ಪ್ರತಾಪ್‌ ಜೈಲಿನಿಂದ ಹೊರಗೆ ಬಂದಿದ್ದಾರೆ. ಜೈಲಿನಿಂದ ಹೊರಬಂದ ತಕ್ಷಣ ನನಗೆ ನ್ಯಾಯ ಬೇಕು ಎಂದು, ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ. ತುಮಕೂರು  ಜಿಲ್ಲೆ ಮಧುಗಿರಿಯ ಉಪ ಕಾರಾಗೃಹದಿಂದ ಹೊರ ಬಂದ ಡ್ರೋನ್‌ ಪ್ರತಾಪ್‌, ನಾನು ಒಂದೇ ಒಂದು ಪ್ರಶ್ನೆ ಕೇಳುತ್ತೇನೆ. ದೇಶಾದ್ಯಂತ ನೂರಾರು ಎಕ್ಸ್ ಪೆರಿಮೆಂಟ್ ಪೋಸ್ಟ್ ಮಾಡಿದ್ದಾರೆ‌‌..ಅವ್ರನ್ನೆಲ್ಲಾ ಯಾಕೆ ಅರೆಸ್ಟ್ ಮಾಡಿಲ್ಲಾ, ನನ್ನೊಬ್ಬನನ್ನೇ ಏಕೆ ಅರೆಸ್ಟ್ ಮಾಡಿದ್ದೀರ ಎಂದು ಪ್ರಶ್ನೆ ಮಾಡಿದ್ದಾರೆ. ಹೊರದೇಶದಲ್ಲಿರಬಹುದು, ನಮ್ಮ ದೇಶದಲ್ಲಿರಬಹುದು ಐಪಿಸಿ ದೇಶದಲೆಲ್ಲಾ ಒಂದೇ,ಕಾನೂನು ಎಲ್ರಿಗೂ‌ ಒಂದೇ..ಕೇಜಿಗಟ್ಟಲೇ ಸೋಡಿಯಂ ಉಪಯೋಗಿಸಿ‌ ಬೇರೆಯವರೆಲ್ಲಾ ಸೈನ್ಸ್ ಎಕ್ಸ್‌ಪೆರಿಮೆಂಟ್ ಮಾಡಿದ್ದಾರೆ..ಯಾರ ಮೇಲೂ‌ ಕೇಸ್ ಆಗದೇ ಇರೋದು,ಪ್ರಶ್ನೆ ಮಾಡದೇ ಇರೋದು, ನನ್ನ ಮೇಲೆ ಏಕೆ ಅಂತಾ ನೀವೆ‌ ಹುಡುಕಬೇಕು ಎಂದಿದ್ದಾರೆ. ಅಲ್ಲದೇ ನಾನು ಮಾಡಿರೋದು ಸೈನ್ಸ್ ಅಂಡ್ ಎಜುಕೇಷನ್ ಪರ್ಪಸ್. ಮೊದಲೇ ಡಿಸ್‌ ಕ್ಲೈಮರ್‌ ಹಾಕಿದ್ದೆ ಎಂದು ಹೇಳಿದ್ದಾರೆ.