ಕರ್ನಾಟಕ

ಕಲ್ಲು ಕ್ವಾರಿಯಲ್ಲಿ ಮದ್ದು ಸ್ಪೋಟ : ಇಬ್ಬರಿಗೆ ಗಂಭೀರ ಗಾಯ

ಕಲ್ಲು ಕ್ವಾರಿಯಲ್ಲಿ ಕ್ವಾರಿಗೆ ಇಟ್ಟಿದ್ದ ಮದ್ದು ಸ್ಪೋಟಗೊಂಡು ಇಬ್ಬರಿಗೆ ಗಂಭೀರ ಗಾಯವಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸಹಳ್ಳಿ ಗ್ರಾಮದ ಬಳಿ ಘಟನೆ ಈ ನಡೆದಿದೆ.

ತುಮಕೂರು : ಕಲ್ಲು ಕ್ವಾರಿಯಲ್ಲಿ ಕ್ವಾರಿಗೆ ಇಟ್ಟಿದ್ದ ಮದ್ದು ಸ್ಪೋಟಗೊಂಡು ಇಬ್ಬರಿಗೆ ಗಂಭೀರ ಗಾಯವಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸಹಳ್ಳಿ ಗ್ರಾಮದ ಬಳಿ ಘಟನೆ ಈ ನಡೆದಿದೆ. ಕ್ವಾರಿಯಲ್ಲಿ ಬಂಡೆ ಸ್ಪೋಟಿಸಲು ಮದ್ದು ಇಟ್ಟಿದ್ರು. ಆದರೆ ಮದ್ದು ಸ್ಪೋಟಿಸದ ಕಾರಣ ಪರಿಶೀಲಿಸಿ ನಿಷ್ಕ್ರಿಯಗೊಳಿಸಲು ಹೋದಾಗ ಏಕಾಏಕಿ ಸ್ಫೋಟಗೊಂಡಿದೆ.

ಈ ವೇಳೆ ಮಂಜುನಾಥ್ ಹಾಗೂ ಕೋಟಪ್ಪ ಎಂಬುವರಿಗೆ ಗಂಭೀರ ಗಾಯವಾಗಿದೆ. ಸದ್ಯ ಗಾಯಳುಗಳನ್ನ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಈ ಘಟನೆ ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.