ಮಂಗಳೂರಿನಲ್ಲಿ ನಡೆಯುತ್ತಿರುವ ಮಾರ್ನಮಿ ಚಿತ್ರದ ಶೂಟಿಂಗ್ ಸ್ಪಾಟ್ ಗೆ, ದುನಿಯಾ ವಿಜಯ್ ಭೇಟಿ ನೀಡಿದ್ದಾರೆ. ಚಿತ್ರೀಕರಣದ ವೇಳೆ ಚಿತ್ರದ ಕೆಲವು ದೃಶ್ಯಗಳನ್ನು ನೋಡಿ, ಸಿನಿ ತಂಡಕ್ಕೆ ಬಹುಪರಾಕ್ ಎಂದಿದ್ದಾರೆ.
ಯುವ ಪ್ರತಿಭೆ ರಿಷಿತ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ, ಮಾರ್ನಮಿ ಚಿತ್ರದಲ್ಲಿ ರಿತ್ವಿಕ್ ಹಾಗೂ ಚೈತ್ರಾ ಜೆ.ಆಚಾರ್ ಅವರು ನಟಿಸುತ್ತಿದ್ದಾರೆ. ಟೈಟಲ್ ಟೀಸರ್ ನಿಂದಲೇ ಭಾರಿ ನಿರೀಕ್ಷೆ ಹುಟ್ಟಿಸಿರುವ, ಈ ಚಿತ್ರ ಕರಾವಳಿಯ ಪ್ರೇಮ ಕಥೆಯನ್ನು ಒಳಗೊಂಡಿದೆ. ಚಿತ್ರತಂಡಕ್ಕೆ ನಟ ದುನಿಯಾ ವಿಜಯ್ ಅಭಿನಂದನೆ ಸಲ್ಲಿಸಿದ್ದಾರೆ.