ಬೆಂಗಳೂರು - ಕಳೆದ 60 ವರ್ಷದಲ್ಲಿ ಆಗದಿರುವ ಕೆಲಸ ನಮ್ಮ ಕಾಲದಲ್ಲಿ ಆಗಿದೆ - ಇನ್ನೂ ಮೂರನೇ ಬಾರಿ ಮೋದಿ ನಾಯಕತ್ವದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಒಂದು ಮತ್ತು ಎರಡನೇ ಅವಧಿಯಲ್ಲಿ ಮಾಡಿದ ಅಭಿವೃದ್ಧಿಕಾರ್ಯ ದೇಶದ ಯಾವ ಭಾಗಕ್ಕೆ ಹೋದರು ಕಾಣುತ್ತದೆ. 12 ಲಕ್ಷದ ತನಕ ಟ್ಯಾಕ್ಸ್ ಇಲ್ಲ ಇದು ಮಧ್ಯಮ ವರ್ಗಕ್ಕೆ ಅನುಕೂಲವಾಗಿದೆ. 2014 ರಲ್ಲಿ ಹೇಗೆ ಆಡಳಿತ ಇತ್ತು.ಅಟಲ್ ಬಿಹಾರಿ ವಾಜಪೇಯಿ ಅವಧಿ ಬಳಿಕ ಯುಪಿಎ ಅವಧಿಯಲ್ಲಿ ಭಾರತದ ಎಕಾನಮಿ ಬಹಳ ಕೆಟ್ಟ ಸ್ಥಿತಿಲಿ ಇತ್ತು.2014 ಎಲ್ಲಿ ಬ್ಯಾಂಕಿಂಗ್ ವಲಯ ಉತ್ತಮ ಆಗಿರಲಿಲ್ಲ .ಮೋದಿ ಅದಕ್ಕೊಂದು ಶೇಪ್ ನೀಡಿದರು ಎಂದು ಹೇಳಿದ್ದಾರೆ.
ಪ್ರತಿ ವರ್ಷ ಹೈವೆ, ರೈಲ್ವೆ, ಏರ್ಪೋಟ್ ಅಭಿವೃದ್ಧಿ ಆಯಿತು. ಕೇಂದ್ರ ಸರ್ಕಾರದ ಆಡಳಿತಕ್ಕೆ ಜನ ಮೆಚ್ಚುಗೆ ದೊಡ್ಡದಾಗಿಯೇ ಸಿಕ್ತಿದೆ. ಮೋದಿಯವರ ದೂರದೃಷ್ಟಿ ಯೋಜನೆಗಳಿಗೆ ಜನರ ಬೆಂಬಲ ಸಿಕ್ಕಿದೆ.ಜನಧನ್, ಉಜ್ವಲಾ, ಜಲಜೀವನ್ ಯೋಜನೆಗಳು ಜನ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿವೆ. ಮೂಲಸೌಕರ್ಯ ವೃದ್ಧಿ, ಶಿಕ್ಷಣ ಅಭಿವೃದ್ಧಿ, ರೈಲ್ವೇ ಯೋಜನೆಗಳು ಜನರ ಬದುಕಿನ ಗತಿ ಬದಲಿಸಿವೆ. ಈ ಸಲದ ಬಜೆಟ್ ನ ಬಹುಮುಖ್ಯ ಅಂಶ ತೆರಿಗೆ ಸುಧಾರಣೆ ಆಗಿದೆ. ಮೋದಿಯವರ ಆರ್ಥಿಕ ಚಿಂತನೆಗಳು ಸಾಕಷ್ಟು ಬದಲಾವಣೆ ತಂದಿದೆ. ಹತ್ತು ವರ್ಷಗಳ ಹಿಂದೆ ಕಾಲ್ ಡ್ರಾಪ್ ಆಗೋದು ದೊಡ್ಡ ಚರ್ಚೆ ಆಗಿತು . ಈಗ ನಮಗೆ ಉತ್ತಮ 5ಜಿ ನೆಟ್ ವರ್ಕ್ ಇದೆ. ಕಳೆದ ಹತ್ತು ವರ್ಷದಿಂದ ವಿವಿಗಳಿ, ಐಐಎಂ, ಐಐಟಿ, ಮೆಡಿಕಲ್ ಕಾಲೇಜುಗಳ ಸಂಖ್ಯೆ ದುಪ್ಪಟ್ಟು ಆಗಿವೆ. ಬಡ-ಮಧ್ಯಮ ವರ್ಗದ ಮೇಲೆ ಈ ಬಾರಿ ಬಜೆಟ್ ಫೋಕಸ್ ಮಾಡಿದೆ. ಕಿಸಾನ್ ಸಮ್ಮಾನ್ ನಿಧಿಯಂತಹ ರೈತ ಕಲ್ಯಾಣ ಯೋಜನೆಗಳು ಬದಲಾವಣೆಗೆ ಸಾಕ್ಷಿ ಆಗಿವೆ. ಸಣ್ಣ ಅತಿ ಸಣ್ಣ ಕೈಗಾರಿಕೆಗಳಿಗೆ ದೊಡ್ಡ ನಿರೀಕ್ಷೆ, ಭರವಸೆ ನಮ್ಮ ಸರ್ಕಾರದಿಂದ ಸಿಕ್ಕಿದೆ. ಈಗ ದೇಶ ದೊಡ್ಡ ಆರ್ಥಿಕ ವ್ಯವಸ್ಥೆ ಸೃಷ್ಟಿಸಿದೆ. ಹಣದುಬ್ಬರಕ್ಕೆ ಕಡಿವಾಣ ಬಿದ್ದಿದೆ. 12 ಲಕ್ಷದವರೆಗೆ ತೆರಿಗೆ ವಿನಾಯ್ತಿ ಬಜೆಟ್ ನ ಅತೀ ದೊಡ್ಡ ನಿರ್ಧಾರ. ಬಂಡವಾಳ ಹೂಡಿಕೆ ಕಾರ್ಯಕ್ರಮಗಳಿಗೂ ಬಜೆಟ್ ವೇಗ ಕೊಟ್ಟಿದೆ. 15 ಲಕ್ಷ ಕೋಟಿ, ಕೇಂದ್ರದ ಬಂಡವಾಳ ಹೂಡಿಕೆ ಪ್ರಮಾಣವಾಗಿದೆ. ಇದು ಕಳೆದ ಹತ್ತು ವರ್ಷಗಳ ಹಿಂದೆ 2.5 ಲಕ್ಷ ಕೋಟಿ ಮಾತ್ರ ಇತ್ತು. ಜನರೆದುರು ಈಗ ಸಾಕಷ್ಟು ಅವಕಾಶಗಳು ಇವೆ ಉದ್ಯೋಗ ಹಾಗೂ ಉದ್ಯಮ ಅವಕಾಶಗಳು ವಿಪುಲವಾಗಿವೆ. ನಾವು ಈಗ ಜಗತ್ತಿನಲ್ಲಿ ಅತ್ಯಂತ ಉತ್ತಮ 5g ನೆಟ್ ವರ್ಕ್ ಹೊಂದಿದ್ದೇವೆ. ಅತಿ ಕಡಿಮೆ ಬೆಲೆ ಇಂಟರ್ನೆಟ್ ಲಭ್ಯ. ಮೋದಿ ದೇಶಕ್ಕೆ ಉತ್ತಮ ಪೌಂಡೇಶನ್ ಹಾಕಿದರು . ನಮ್ಮ ದೃಷ್ಟಿ ಮಧ್ಯಮ ಮತ್ತು ಕೆಳ ವರ್ಗದ ಜನರ ಮೇಲೆ ಇತ್ತು. ಕೋವಿಡ್ ಬಳಿಕ ಲಾರ್ಜ್ ಎಕಾನಾಮಿಕ್ ದೇಶ ೬ ರಿಂದ ೮ ರ ತನಕ ನಮ್ಮ ಆರ್ಥಿಕ ವ್ಯವಸ್ಥೆ ನಿರಂತರವಾಗಿ ಪ್ರಗತಿ ಕಾಣುತ್ತಿದೆ.ಸೆಮಿ ಕಂಡಕ್ಟರ್ ಇಲ್ಲೆ ಮೆನಿಫರಕ್ಚರ್ ಆಗುತ್ತಿದೆ. ಒಂದು ಫುಟ್ ವೇರ್ ಕಂಪನಿ ಆದರೆ ಕನಿಷ್ಠ 30 ಸಾವಿರ ಉದ್ಯೋಗ ಸಿಗತ್ತುದೆ. ಸಿಂಗಲ್ ಮೊಬೈಲ್ ಕಂಪನಿ ಫ್ಯಾಕ್ಟರಿಯಲ್ಲಿ 40ಸಾವಿರ ಕೆಲಸ ಸಿಗುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು .