ಕೇರಳದ ಮಲಪ್ಪುರಂನಲ್ಲಿನ ದೇವಸ್ಥಾನವೊಂದರ ಧಾರ್ಮಿಕ ಉತ್ಸವದ ವೇಳೆ ಆನೆಯೊಂದು ದಾಳಿ ಮಾಡಿದ ಪರಿಣಾಮ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ.. ತಿರೂರಿನಲ್ಲಿ ನಡೆದ ಪುತಿಯಂಗಡಿ ಉತ್ಸವದಲ್ಲಿ ನೂರಾರು ಮಂದಿ ಜಮಾಯಿಸಿದ್ದರು.. ಈ ಉತ್ಸವದಲ್ಲಿ ಐದು ಆನೆಗಳನ್ನು ಅಲಂಕರಿಸಲಾಗಿತ್ತು.. ನೂರಾರು ಜನರು ನೆರೆದಿದ್ದ ವೇಳೆ ಏಕಾಏಕಿ ಒಂದು ಆನೆ ಎದುರಿಗಿದ್ದ ವ್ಯಕ್ತಿ ಓರ್ವನನ್ನ ಸೊಂಡಿಲಿನಿಂದ ಗಿರಗಿರನೆ ತಿರುಗಿಸಿ ಎಸೆದಿದೆ.. ಆನೆ ದಾಳಿಗೆ ಒಳಗಾದ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯ ಆಸ್ಪತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.. ಉತ್ಸವದ ಮಧ್ಯೆ ರೊಚ್ಚಿಗೆದ್ದು ಆನೆ ನಡೆಸಿದ ದಾಳಿಯಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ..ʼ