ವೈರಲ್

ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ಫೈಟ್..ವಿಡಿಯೋ ವೈರಲ್

ಧನಂಜಯ ಆನೆ ಕಂಜನ್ ಆನೆಯ ಮೇಲೆ ಅಟ್ಯಾಕ್ ಮಾಡಿದೆ. ಗಲಾಟೆ ವಿಡಿಯೋವನ್ನು ಪ್ರವಾಸಿಗರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಮದದಲ್ಲಿಇರುವ ಧನಂಜಯ ಆನೆ, ಧನಂಜಯ, ಕಂಜನ್ ಆನೆಗಳು ದಸರಾದಲ್ಲಿ ಮೈಸೂರು ಅರಮನೆಯಲ್ಲಿ ಹೊಡೆದಾಡಿಕೊಂಡಿದ್ದವು.

ಕೊಡಗು : ಧನಂಜಯ, ಕಂಜನ್ ಆನೆಗಳು ಮತ್ತೆ ಫೈಟ್ ಮಾಡಿಕೊಂಡಿದ್ದು, ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳು ಫೈಟ್ ಮಾಡಿಕೊಂಡಿವೆ. ಧನಂಜಯನ ಹೊಡೆತಕ್ಕೆ ಕಂಜನ್ ಆನೆ ಗಂಭೀರವಾಗಿ ಗಾಯಗೊಂಡಿದೆ.  ಕಂಜನ್ ಆನೆ ಕಾಲಿಗೆ ಗಂಭೀರ ಗಾಯವಾಗಿದೆ. ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರದಲ್ಲಿ ಈ ಘಟನೆ ನಡೆದಿದೆ.

ಧನಂಜಯ ಆನೆ ಕಂಜನ್  ಆನೆಯ ಮೇಲೆ ಅಟ್ಯಾಕ್ ಮಾಡಿದೆ. ಗಲಾಟೆ ವಿಡಿಯೋವನ್ನು ಪ್ರವಾಸಿಗರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಮದದಲ್ಲಿಇರುವ ಧನಂಜಯ ಆನೆ, ಧನಂಜಯ, ಕಂಜನ್ ಆನೆಗಳು ದಸರಾದಲ್ಲಿ ಮೈಸೂರು ಅರಮನೆಯಲ್ಲಿ ಹೊಡೆದಾಡಿಕೊಂಡಿದ್ದವು. ಕವಾಡಿ ಎಷ್ಟೇ ಪ್ರಯತ್ನಿಸಿದರೂ  ಧನಂಜಯ ಆನೆ ಸುಮ್ಮನಾಗಿರಲಿಲ್ಲ, ಮತ್ತೆ ಮತ್ತೆ ಕಂಜನ್ ಮೇಲೆ ಧನಂಜಯ ಆನೆ ಅಟ್ಯಾಕ್ ಮಾಡಿದೆ. ಶಿಬಿರದಲ್ಲಿದ್ದ ಇತರೆ ಮಾವುತ ಕವಾಡಿಗರು ಪ್ರಯತ್ನಿಸಿದರು ಧನಂಜಯ ಆನೆ  ಮತ್ತೆ ಫೈಟ್ ಮಾಡಿಕೊಂಡಿದೆ. ಕೊನೆಗೆ ಎರಡು ಆನೆಗಳನ್ನ ಮಾವುತರು ಕಾವಾಡಿಗಳು ಕಂಟ್ರೋಲ್‌ ಗೆ ತೆಗೆದುಕೊಂಡು ಬೇರ್ಪಡಿಸಿದ್ದಾರೆ.