ವಿದೇಶ

ನೊಬೆಲ್‌ ಶಾಂತಿ ಪ್ರಶಸ್ತಿ ನಾಮನಿರ್ದೇಶನ ರೇಸ್‌ನಲ್ಲಿ ಎಲಾನ್‌ ಮಸ್ಕ್‌..!

ಈ ವರ್ಷದ ಅಕ್ಟೋಬರ್‌ನಲ್ಲಿ ಅಂತಿಮ ಪ್ರಶಸ್ತಿಯ ಅಂತಿಮ ಆಯ್ಕೆ ಮಾಡಿ, ನಂತರ ವಿಜೇತರನ್ನ ಅಧಿಕೃತ ಘೋಷಣೆಯಾಗುತ್ತದೆ. ಇದೀಗ ವಿಶ್ವದ ಶ್ರೀಮಂತ ಎಂದು ಕರೆಸಿಕೊಂಡಿರುವ ಎಲಾನ್‌ ಮಸ್ಕ್‌ ಅವರು ನೊಬೆಲ್‌ ಶಾಂತಿ ಪ್ರಶಸ್ತಿ ರೇಸ್‌ಗೂ ಇಳಿದಿದ್ದಾರೆ.

ಜಗತ್ತಿನ ಅತೀ ಶ್ರೀಮಂತ ಎಂದೇ ಕರೆಸಿಕೊಳ್ಳುವ ಅಮೆರಿಕದ ಉದ್ಯಮಿ, ‘ಸ್ಪೇಸ್‌ ಎಕ್ಸ್‌’ ಸಿಇಒ ಎಲಾನ್ ಮಸ್ಕ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.. 2025ರ ನೊಬೆಲ್ ಶಾಂತಿ ಪ್ರಶಸ್ತಿಗೆ  ಬಿಲಿಯನೇರ್ ಎಲಾನ್‌ ಮಸ್ಕ್ ಅವರನ್ನ ವಾಕ್ ಸ್ವಾತಂತ್ರ್ಯ ಹಾಗೂ ಮಾನವ ಹಕ್ಕುಗಳ ಪರವಾದ ಕೊಡುಗೆಗಳನ್ನು ಗುರುತಿಸಿ ನಾಮನಿರ್ದೇಶನಕ್ಕಾಗಿ ಅರ್ಜಿಯನ್ನು ನೊಬೆಲ್ ಸಮಿತಿಗೆ ಸಲ್ಲಿಸಲಾಗಿದೆ ಎಂದು ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯ ಬ್ರಾಂಕೊ ಗ್ರಿಮ್ಸ್ ಹೇಳಿದ್ದಾರೆ. ಈ ವರ್ಷದ ಅಕ್ಟೋಬರ್‌ನಲ್ಲಿ ಅಂತಿಮ ಪ್ರಶಸ್ತಿಯ ಅಂತಿಮ ಆಯ್ಕೆ ಮಾಡಿ, ನಂತರ ವಿಜೇತರನ್ನ ಅಧಿಕೃತ ಘೋಷಣೆಯಾಗುತ್ತದೆ. ಇದೀಗ ವಿಶ್ವದ ಶ್ರೀಮಂತ ಎಂದು ಕರೆಸಿಕೊಂಡಿರುವ ಎಲಾನ್‌ ಮಸ್ಕ್‌ ಅವರು ನೊಬೆಲ್‌ ಶಾಂತಿ ಪ್ರಶಸ್ತಿ ರೇಸ್‌ಗೂ ಇಳಿದಿದ್ದಾರೆ.