ಕರ್ನಾಟಕ

ಗೋ ಹತ್ಯೆ ಮಾಡೋರಿಗೆ ಎನ್‌ಕೌಂಟರ್‌ ಸಂದೇಶ ರವಾನೆ ಆಗಬೇಕು : ಸಿ.ಟಿ. ರವಿ

ಗೋವುಗಳ ಕಳ್ಳ ಕಬೀರ್‌ ಎನ್‌ಕೌಂಟರ್‌ನಲ್ಲಿ ಸತ್ತಾಗ 10 ಲಕ್ಷ ಪರಿಹಾರ ಕೊಟ್ರು, ಆ ಮೂಲಕ ಒಂದು ಕೆಟ್ಟ ಸಂದೇಶ ರವಾನೆ ಮಾಡಿದ್ರು, ನೀವು ಹಸು ಕದ್ದರೂ, ಏನು ಮಾಡಿದ್ರೂ ನಿಮ್ಮ ಜೊತೆಗಿರುತ್ತೇವೆ ಅನ್ನೋ ಕೆಟ್ಟ ಸಂದೇಶ ಕಾಂಗ್ರೆಸ್ ಕೊಡ್ತು, ಇದರ ಪರಿಣಾಮ ಹೀಗಾಗಿದೆ, ಸಚಿವರು ಹೀಗೆ ಹೇಳಿರುವುದು ಉಳಿದ ಶಾಸಕರಿಗೂ ಧೈರ್ಯ ಬರಲಿ.

ದನ ಕದ್ದವರನ್ನ ನಾನೇ ಗುಂಡಿಟ್ಟು ಕೊಲ್ಲುತ್ತೇನೆಂಬ ಸಚಿವ ಮಂಕಾಳ್ ವೈದ್ಯ ಹೇಳಿಕೆಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ. ಆ ರೀತಿ ಹೇಳುವ ಧೈರ್ಯ ಬಂದಿದ್ಯಲ್ಲ ಒಳ್ಳೆಯ ಸಂಕೇತ, ಅವರ ಭಾವನೆಗಳನ್ನ ಗುರುತಿಸಬೇಕು, ಕಾಂಗ್ರೆಸ್‌ನಲ್ಲಿ ಮಹಾತ್ಮ ಗಾಂಧಿಜೀಯವರು ಗಟ್ಟಿಯಾಗಿ ಹೇಳಿದ್ದು ಬಿಟ್ಟರೆ, ಗಾಂಧಿ ನಂತರ ಬಂದ ರಾಜಕೀಯ ವಾರಸುದಾರರು ಗೋಹತ್ಯೆಯನ್ನ ಪರೋಕ್ಷವಾಗಿ ಸಮರ್ಥನೆ ಮಾಡಿಕೊಂಡೇ ಬಂದಿದ್ದರು, ಅದರ ಪರಿಣಾಮ ಗೋವುಗಳ ಕಳ್ಳತನ ಶುರುವಾಯ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಹಾಡಹಗಲೇ ಗರ್ಭದ ಹಸುವನ್ನ ಕೊಂದು ವಿಡಿಯೋ ಮಾಡುವ ವಿಕೃತ ಮನಸ್ಥಿತಿ ಇದೆ. ದನ ಕದ್ದವರನ್ನ ಗುಂಡಿಕ್ಕಿ ಕೊಲ್ಲುತ್ತೇವೆ ಎಂದು ಹೇಳುವ ಧೈರ್ಯ ಈಗ ಬಂದಿದೆ. ಕಾಂಗ್ರೆಸ್‌ನ ಉಳಿದೆಲ್ಲರಿಗೂ ಇದೇ ಬುದ್ಧಿ ಬಂದ್ರೆ ಸಮಸ್ಯೆ ತನ್ನಿಂದ ತಾನೇ ಬಗೆಹರಿಯುತ್ತೆ, ಗೋವುಗಳ ಕಳ್ಳ ಕಬೀರ್‌ ಎನ್‌ಕೌಂಟರ್‌ನಲ್ಲಿ ಸತ್ತಾಗ 10 ಲಕ್ಷ ಪರಿಹಾರ ಕೊಟ್ರು, ಆ ಮೂಲಕ ಒಂದು ಕೆಟ್ಟ ಸಂದೇಶ ರವಾನೆ ಮಾಡಿದ್ರು, ನೀವು ಹಸು ಕದ್ದರೂ, ಏನು ಮಾಡಿದ್ರೂ ನಿಮ್ಮ ಜೊತೆಗಿರುತ್ತೇವೆ ಅನ್ನೋ ಕೆಟ್ಟ ಸಂದೇಶ ಕಾಂಗ್ರೆಸ್ ಕೊಡ್ತು, ಇದರ ಪರಿಣಾಮ ಹೀಗಾಗಿದೆ, ಸಚಿವರು ಹೀಗೆ ಹೇಳಿರುವುದು ಉಳಿದ ಶಾಸಕರಿಗೂ ಧೈರ್ಯ ಬರಲಿ. ಅವರು ಹತ್ಯೆ ಮಾಡಬೇಕು ಅಂತ ನಾನು ಬಯಸುವುದಿಲ್ಲ, ಹೀಗೆ ಹೇಳಿದ್ರೆ ಗೋ ಹತ್ಯೆ ಮಾಡುವವರಿಗೆ ಸಂದೇಶ ಹೋಗುತ್ತದೆ ಎಂದಿದ್ದಾರೆ.