ಕರ್ನಾಟಕ

ಬೆಳಗಾವಿಗೆ ಮಂಜೂರಾಗಿದ್ದ ವಂದೇ ಭಾರತ್ ರೈಲು ಹುಬ್ಬಳ್ಳಿಗೆ ವಿಸ್ತರಣೆ ; V. ಸೋಮಣ್ಣ..!

ತಾಂತ್ರಿಕ ಸಮಸ್ಯೆ ನೆಪವೊಡ್ಡಿ ಬೆಳಗಾವಿ- ಬೆಂಗಳೂರು ವಂದೇ ಭಾರತ ರೈಲು ತಡೆ ವಿಚಾರವಾಗಿ ಮಾತನಾಡಿದ ಅವರು, ಈಗ ಬೆಳಗಾವಿಗೆ ಮಂಜೂರಾಗಿದ್ದ ವಂದೇ ಭಾರತ್ ರೈಲು ಹುಬ್ಬಳ್ಳಿಗೆ ವಿಸ್ತರಣೆಯಾಗಲಿದೆ. ನಾನು ಬಂದು ಮೂರು ತಿಂಗಳು ಆಗಿದೆ. ಹೇಳದು ಕೆದಕಿ ಕೆಲಸ ಮಾಡಲು ಆಗಲ್ಲ ಎಂದು ಹೇಳಿದ್ಧಾರೆ.

ಬೆಳಗಾವಿ : ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 7 ರೈಲು ಉದ್ಘಾಟನಾ ಮಾಡಲಿದ್ದಾರೆ ಎಂದು ಬೆಳಗಾವಿಯಲ್ಲಿ ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಕೊಲ್ಹಾಪುರ ಪುಣೆ ರೈಲು ಉದ್ಘಾಟನೆ ಮಾಡುತ್ತೆವೆ. ಬೆಳಗಾವಿಯಲ್ಲಿ ಪುಣೆಯಿಂದ ವಂದೇ ಭಾರತ ರೈಲು ರಿಸಿವ್ ಮಾಡ್ತಿನಿ ಎಂದು ಹೇಳಿದ್ಧಾರೆ.

 

ತಾಂತ್ರಿಕ ಸಮಸ್ಯೆ ನೆಪವೊಡ್ಡಿ ಬೆಳಗಾವಿ- ಬೆಂಗಳೂರು ವಂದೇ ಭಾರತ ರೈಲು ತಡೆ ವಿಚಾರವಾಗಿ ಮಾತನಾಡಿದ ಅವರು, ಈಗ ಬೆಳಗಾವಿಗೆ ಮಂಜೂರಾಗಿದ್ದ ವಂದೇ ಭಾರತ್ ರೈಲು ಹುಬ್ಬಳ್ಳಿಗೆ ವಿಸ್ತರಣೆಯಾಗಲಿದೆ. ನಾನು ಬಂದು ಮೂರು ತಿಂಗಳು ಆಗಿದೆ. ಹೇಳದು ಕೆದಕಿ ಕೆಲಸ ಮಾಡಲು ಆಗಲ್ಲ ಎಂದು ಹೇಳಿದ್ಧಾರೆ.

ಈ ಬಗ್ಗೆ ಮಾತನಾಡಿದ ಅವರು, ಬೆಳಗಾವಿಗೆ ಇಂದು ವಂದೇ ಭಾರತ್ ರೈಲು ಉದ್ಘಾಟನಾ ಮಾಡುತ್ತೆವೆ. ಕೆಲ ದಿನಗಳಲ್ಲಿ ಮತ್ತೊಂದು ರೈಲು ಬೆಳಗಾವಿಗೆ ಬರಲಿದೆ. ಬೆಂಗಳೂರು- ಬೆಳಗಾವಿ ವಂದೇ ಭಾರತ್ ಬಗ್ಗೆ ‌ಚರ್ಚೆ ಮಾಡಿದ್ದಿವಿ. ಹಿಂದೆ ಏನಾಗಿದೆ ಎಂಬದು ನನಗೆ ಗೊತ್ತಿಲ್ಲ. ಮೋದಿಯವರು ಹೇಳೆಯದು ಏನಾಯಿತು ಎಂದು ಕೆದಕಬಾರದು ಎಂದು ಮನವರಿಕೆ ಮಾಡಿದ್ದಾರೆ.

ದಿ.‌ ಸುರೇಶ ಅಂಗಡಿ ಇದ್ದ ಸಂದರ್ಭದಲ್ಲಿ ಬೆಳಗಾವಿ- ಹುಬ್ಬಳ್ಳಿ ನೇರ ರೈಲು ವಿಚಾರವಾಗಿ ಮಾತನಾಡಿದ ಅವರು, ನೇರ ರೈಲು ಮಾಡಲು ಎಲ್ಲಾ ವ್ಯವಸ್ಥೆ ಮಾಡ್ತಿವಿ. ಬೆಳಗಾವಿ- ಮುಂಬೈಗೆ ನೇರ ರೈಲು ಬಗ್ಗೆ ಕುಳಿತು ಮಾತನಾಡೊಣ. ಜನ ಸಾಮಾನ್ಯರಿಗೆ ಅನುಕೂಲಕ್ಕೆ ಏನ್ ಬೇಕು ಎಲ್ಲವೂ ಮಾಡುತ್ತೆವೆ ಎಂದು ಹೇಳಿದ್ದಾರೆ.

ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ  ರೈಲು ಸಂಪರ್ಕ ವಿಚಾರ‌ವಾಗಿ ಮತನಾಡಿ, ಈ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಚರ್ಚೆ ಮಾಡಿದ್ದರು. ಸರ್ವೇ ಕಾರ್ಯ ಮಾಡಲು ಸೂಚನೆ ನೀಡಿದ್ದೇನೆ‌. ಸರ್ವೇ ವರದಿ ಬಂದ ಮೇಲೆ ಕ್ರಮ ವಹಿಸುತ್ತೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ನಾಗಮಂಗಲ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, 54 ಜನರನ್ನು ಬಂಧನ ಮಾಡಿದ್ದಾರೆ. ದುರುದ್ದೇಶ ಪೂರಕವಾಗಿ ನಡೆದ ಹಿಂಸಾ ಕೃತ್ಯ ಅದು. 2023ರಲ್ಲಿಯೂ ಹೀಗೆ ಆಗಿತ್ತು ಎಂಬುದು ಅವರೇ ಹೇಳಿದ್ದಾರೆ. ಯಾಕೆ ಬಂಧನ, ಎನು ಎಂಬುದು ತಿಳಿದುಕೊಂಡು ಮಾತನಾಡ್ತಿನಿ ಎಂದು ಹೇಳಿದ್ಧಾರೆ.