ಕರ್ನಾಟಕ

ಕಾಂಗ್ರೆಸ್‌ ನಾಯಕರ ನಡುವೆ ಜೋರಾಯ್ತು ಬಣ ರಾಜಕೀಯ

ಅಧಿಕಾರ ಹಂಚಿಕೆ ವಿಚಾರ ಹೈಕಮಾಂಡ್ ಹೇಳಿದಂತೆ ಪಾಲಿಸುತ್ತೇವೆ. ಹೈಕಮಾಂಡ್ ತೀರ್ಮಾನವೇ ಅಂತಿಮ ನಿರ್ಧಾರ ಎಂಬ ಸಂದೇಶವನ್ನ ಸಿಎಂ ಸಿದ್ದರಾಮಯ್ಯ ರವಾನಿಸಿದ್ದಾರೆ.

ಬೆಂಗಳೂರು: ಕಾಂಗ್ರೆಸ್‌ ಪಡೆಯಲ್ಲಿ ನಾಯಕರ ಬಣ ಬಡಿದಾಟ ಮುಗಿವಂತೆ ಕಾಣುತ್ತಿಲ್ಲ. ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ಸಚಿವ ಕೆ.ಎನ್‌ ರಾಜಣ್ಣ ನೇರಾ.. ನೇರ ವಾಗ್ದಾಳಿಯನ್ನ ನಡೆಸುತ್ತಿದ್ದಾರೆ. ಹೀಗಾಗಿ ರಾಜಣ್ಣ ನಡೆಯ ವಿರುದ್ಧ ಡಿಕೆ ಶಿವಕುಮಾರ್‌ ಆಪ್ತರು ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದಾರೆ. ನಾಯಕರ ಹೇಳಿಕೆಯಿಂದ ಪಕ್ಷದಲ್ಲಿ ಮತ್ತೆ ಟೀಮ್ ವಾರ್ ಶುರುವಾಗಿದೆ. ಆದ್ರೆ, ಈ ಮಧ್ಯೆ  ಸಿಎಂ ಸಿದ್ದರಾಮಯ್ಯ ನಡೆ ತೀರ ಕುತೂಹಲವನ್ನ ಮೂಡಿಸಿದ್ದು, ನಾಯಕರ ಹೇಳಿಕೆ ವೈಯಕ್ತಿಕ ನಾನು ಪ್ರತಿಕ್ರಿಯಿಸಲ್ಲಾ ಎಂದು ಸೈಲೆಟಾಂಗಿದ್ದಾರೆ. ಅಧಿಕಾರ ಹಂಚಿಕೆ ವಿಚಾರ ಹೈಕಮಾಂಡ್ ಹೇಳಿದಂತೆ ಪಾಲಿಸುತ್ತೇವೆ. ಹೈಕಮಾಂಡ್ ತೀರ್ಮಾನವೇ  ಅಂತಿಮ ನಿರ್ಧಾರ ಎಂಬ ಸಂದೇಶವನ್ನ ಸಿಎಂ ಸಿದ್ದರಾಮಯ್ಯ ರವಾನಿಸಿದ್ದಾರೆ.