ಕೋಲಾರ: ಕಳದೆ ತಿಂಗಳಷ್ಟೇ ಸಾಲು ಸಾಲು ಹಬ್ಬಗಳು ಮುಗಿದಿವೆ. ಹಬ್ಬದ ಸಮಯದಲ್ಲಿದ್ದ ಹೂವುಗಳ ಬೇಡಿಕೆ ಈಗ ತೀವ್ರವಾಗಿ ಕುಸಿತವಾಗಿದೆ. ಹಬ್ಬಗಳು ಮುಗಿದ ಬಳಿಕ ಚೆಂಡು ಹೂವಿನ ಬೆಲೆ ತೀವ್ರ ಕುಸಿತವಾಗಿದೆ. ಈ ಹಿನ್ನೆಲೆ ರೈತರೊಬ್ಬರು ಬೆಳೆದ ಚೆಂಡು ಹೂವನ್ನು ರಸ್ತೆಬದಿ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನೆರ್ನಹಳ್ಳಿಯ ನಾರಾಯಣಪ್ಪ ಎಂಬ ರೈತ ದೇವರ ಪಾದದ ಬಳಿ ಇರಬೇಕಾದ ಹೂವನ್ನು ರಸ್ತೆಯಲ್ಲಿ ಚೆಲ್ಲಿದ್ದಾರೆ. ವ್ಯಾಪಾರಿಗಳು ಕೆಜಿಗೆ 10 ರೂ.ನಂತೆ ಕೇಳುತ್ತಿದ್ದಾರೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ. ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಇಲ್ಲದೆ ಹೂವಿನ ಬೆಳೆಗಾರರು ಕಂಗಾಲಾಗಿದ್ದಾರೆ.