ತುಮಕೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಕೋರ್ಟ್ ಶರತ್ತು ಬದ್ದ ಜಾಮೀನು ನೀಡಿದ್ದರು. ಬೆಲ್ ಶೂರಿಟಿಗೂ ಹಣವಿಲ್ಲದೇ ಆರೋಪಿಗಳ ಕುಟುಂಬಸ್ಥರು ಪರದಾಡುವಂತಾಗಿದೆ. ಸದ್ಯ ಆರೋಪಿಗಳ ಪರಿಸ್ಥಿತಿ ಹೇಗಾಗಿದೆ ಅಂದ್ರೆ ಹೀರೋ ಹಿಂದೆ ಹೋಗಿ ಜೀರೋ ಆದಂತಾಗಿದೆ.

ಹೌದು, ಬೆಲ್ ಶೂರಿಟಿಗೂ ಹಣವಿಲ್ಲದೇ ಆರೋಪಿಗಳ ಕುಟುಂಬಸ್ಥರು ಪರದಾಟ ಹೆಚ್ಚಾಗಿದ್ದು, ಕೋರ್ಟ್ ನಿಂದ ಬೆಲ್ ಸಿಕ್ಕಿ ಐದು ದಿನವಾದ್ರು ಇನ್ನು ಸಿಕ್ಕಿಲ್ಲ ಜೈಲಿನಿಂದ ರಿಲೀಸ್ ಭಾಗ್ಯ ಸಿಕ್ಕಿಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣ ಮೂವರು ಆರೋಪಿಗಳಿಗೆ ಕೋರ್ಟ್ ಶರತ್ತು ಬದ್ದ ಜಾಮೀನು ನೀಡಿದ್ದರು ಬೆಲ್ ಭಾಗ್ಯ ಮಾತ್ರ ಇನ್ನು ಸಿಕ್ಕಿಲ್ಲ.
ಕಳೆದ ಸೋಮವಾರ ಸಂಜೆ ಶರತ್ತು ಬದ್ದ ಜಾಮೀನು ನೀಡಲಾಗಿತ್ತು. ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ಹಾಗೂ ನಿಖಿಲ್ ನಾಯಕ್ ಗೆ ಜಾಮೀನು ಸಿಕ್ಕಿದ್ದು, ಎ-16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ನಿಂದ ಜಾಮೀನು ನೀಡಿದೆ. ಎ-15 ಆರೋಪಿ ಕಾರ್ತಿಕ್ ಹಾಗೂ ಎ-17 ಆರೋಪಿ ನಿಖಿಲ್ ಗೆ 57 ನೇ ಸಿಸಿಹೆಚ್ ಕೋರ್ಟ್ ನಿಂದ ಜಾಮೀನು ಸಿಕ್ಕಿದೆ.
ಸದ್ಯ ಆರೋಪಿಗಳು ತುಮಕೂರು ಜಿಲ್ಲಾ ಕಾರಾಗೃಹದಲ್ಲಿದ್ದು, ಮೂವರು ಆರೋಪಿಗಳಿಗೆ ಕೋರ್ಟ್ ಶರತ್ತು ಬದ್ದ ಜಾಮೀನು ನೀಡಿದೆ. ಜಾಮೀನು ನೀಡಲು ಶೂರಿಟಿದಾರರು ಸಿಗದೇ ಆರೋಪಿಗಳ ಕುಟುಂಬಸ್ಥರು ಪರದಾಡುವಂತಾಗಿದೆ. ಆರೋಪಿಗಳಿಗೆ ಕೋರ್ಟ್ 2 ಲಕ್ಷ ಹಣ, ಹಾಗೂ ಇಬ್ಬರು ಶೂರಿಟಿದಾರರನ್ನ ಕೇಳಿದೆ. 2 ಲಕ್ಷ ಹಣ ಹಾಗೂ ಇಬ್ಬರು ಶೂರಿಟಿದಾರರನ್ನ ಹೊಂದಿಸಲು ಆರೋಪಿಗಳ ಕುಟುಂಬಸ್ಥರು ಪರದಾಡುತ್ತಿದ್ದಾರೆ.
ಆರೋಪಿಗಳ ಕುಟುಂಬಸ್ಥರು ಕಳೆದ ಐದು ದಿನಗಳಿಂದ ಪರದಾಡುತ್ತಿದ್ದು, ಇನ್ನು ಜಾಮೀನಿನ ಕಾನೂನು ಪ್ರಕ್ರಿಯೆ ಮುಗಿಯದ ಹಿನ್ನೆಲೆ, ಇಂದು ಕೂಡಾ ಆರೋಪಿಗಳು ಜೈಲಿನಿಂದ ರಿಲೀಸ್ ಆಗೋದು ಡೌಟು..? ಆರೋಪಿಗಳ ಕುಟುಂಬಸ್ಥರು ಇದುವರೆಗೆ ತುಮಕೂರು ಜಿಲ್ಲಾ ಕಾರಾಗೃಹದ ಬಳಿ ಬಂದಿಲ್ಲವೆಂದು ಹೇಳಲಾಗಿದೆ.