ವೈರಲ್

20 ಕೆಜಿ ಕೇಕ್ ಕತ್ತರಿಸಿ ಗೂಳಿಯ ಹುಟ್ಟುಹಬ್ಬ ಆಚರಿಸಿದ ಮಲೆನಾಡಿನ ರೈತ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡದಲ್ಲಿ ರೈತನೊಬ್ಬ ಗೂಳಿಯ ಹುಟ್ಟುಹಬ್ಬಕ್ಕೆ 20 ಕೆಜಿ ಕೇಕ್​ ತಂದು ಹಬ್ಬವನ್ನೇ ಮಾಡಿದ್ದಾನೆ.

ಶಿವಮೊಗ್ಗ : ಮನುಷ್ಯರು ಹುಟ್ಟು ಹಬ್ಬ ಅಂದ್ರೆ ಕೇಕ್ ಕತ್ತರಿಸಿ ಖುಷಿ ಪಡೋದು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬ ರೈತ ಗೂಳಿಯ ಜನ್ಮ ದಿನಕ್ಕೆ ಬರೋಬ್ಬರಿ 20 ಕೆಜಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾನೆ. 

ಹೌದು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡದಲ್ಲಿ ರೈತನೊಬ್ಬ ಗೂಳಿಯ ಹುಟ್ಟುಹಬ್ಬಕ್ಕೆ 20 ಕೆಜಿ ಕೇಕ್ ತಂದು ಹಬ್ಬವನ್ನೇ ಮಾಡಿದ್ದಾನೆ. ಶೀರಿಹಳ್ಳಿ ತಾಂಡದ ರೈತ ಶಂಕರನಾಯ್ಕ ಎಂಬುವವರು ತಮ್ಮ  ಗೂಳಿಯ ಜನ್ಮದಿನಕ್ಕೆ 20 ಕೆಜಿಯ ಕೇಕ್ ಕತ್ತರಿಸಿ ಅದ್ದೂರಿಯಾಗಿ ತಮ್ಮ ಒಡನಾಡಿ ಎತ್ತಿನ ಜನ್ಮದಿನವನ್ನ ಸಂಭ್ರಮಿಸಿದ್ದಾರೆ. ನಾಯಕರ ಗೂಳಿ 200 ಎಂಬ ಹೆಸರಿನ ಈ ಗೂಳಿಯೂ ಹೋರಿ ಹಬ್ಬದ ಮೂಲಕ ಇಡೀ ಜಿಲ್ಲೆಯಲ್ಲಿ ಪ್ರಸಿದ್ಧಿಯನ್ನ ಪಡೆದಿದೆ.