ಮೈಸೂರು : ರಾಜ್ಯ ಸರ್ಕಾರ ಬಂಡವಾಳ ಶಾಹಿಗಳು, ಭೂಮಾಫಿಯಾ ಪರವಾಗಿದೆ ಅಂತಾ ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟನೆ ನಡೆಸಿದೆ.

ಮೈಸೂರಿನ ನಂಜನಗೂಡು ತಾಲೂಕಿನ ಆಡಳಿತ ಭವನದ ಮುಂಭಾಗ ಜಮಾಯಿಸಿದ ರೈತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ತಲತಲಾಂತರಗಳಿಂದ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ. ಅಧಿಕಾರಿಗಳು ಹಣದಾಸೆಗೆ ಪಟ್ಟಣದಲ್ಲಿರುವವರಿಗೆ ಭೂಮಿಯನ್ನು ಮಂಜೂರು ಮಾಡುತ್ತಿದ್ದಾರೆ. ಭೂಮಿಯನ್ನು ಮಂಜೂರಾತಿ ಮಾಡಿ ದುರಸ್ತಿ ಕಾರ್ಯವನ್ನು ಮಾಡಿ ರೈತರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದಾರೆ. ನಮ್ಮ ಉಸಿರನ್ನು ಕಿತ್ತುಕೊಳ್ಳಿ. ನಾವು ಕೋರ್ಟಿಗೆ ಹೋಗಲು ಸಾಧ್ಯವಿಲ್ಲ. ಆಡಳಿತ ವ್ಯವಸ್ಥೆ ಸುಧಾರಣೆಯಾಗುವವರೆಗೂ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದ್ರು. ಇನ್ನು ಪ್ರತಿಭಟನೆಯಲ್ಲಿ ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್ , ಮಹದೇವನಾಯಕ, ರವಿ, ದೊಡ್ಡಯ್ಯ ,ಹೆಡತಲೆ ಶಂಕರ್, ಮಾದಪ್ಪ ,ಮಹದೇವಸ್ವಾಮಿ, ಮಹೇಶ್ ಸೇರಿದಂತೆ ರೈತರು ಭಾಗವಹಿಸಿದ್ದರು.