ತುಮಕೂರು : ಮಳೆ ಬಾರದ ಹಿನ್ನೆಲೆ, ಗ್ರಾಮಸ್ಥರು ಮಳೆಗಾಗಿ ಮಕ್ಕಳ ಮದುವೆ ಮಾಡಿದ್ದಾರೆ. ಈ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಬುರುಡೆಘಟ್ಟ ಗ್ರಾಮದಲ್ಲಿ ನಡೆದಿದೆ. ಮಳೆ ಬಾರದ ಪರಿಣಾಮ ರೈತತರು ಕಂಗಾಲಾಗಿದ್ದಾರೆ.

ಹೌದು ಮಕ್ಕಳಿಗೆ ಈ ರೀತಿ ಮದುವೆ ಮಾಡಿದ್ರೆ ಮಳೆಯಾಗಲಿದೆ ಎಂದು ಇಲ್ಲಿನ ಗ್ರಾಮಸ್ಥರ ನಂಬಿಕೆಯಾಗಿದೆ. ಈ ಸಂಬಂಧ ಗ್ರಾಮಸ್ಥರು ಕಳೆದ ರಾತ್ರಿ ಮಕ್ಕಳಿಗೆ ಮದುವೆ ಮಾಡಿಸಿದ್ದಾರೆ. ಮಕ್ಕಳಿಗೆ ಮದುವೆ ಉಡುಪು ಧರಿಸಿ ಮದು ಮಕ್ಕಳಂತೆ ಅಲಾಂಕಾರ ಮಾಡಿ, ಆಚರಣೆ ಮಾಡಿದ್ದಾರೆ. ಇದೇ ವೇಳೆ ಮಕ್ಕಳಿಗೆ ಆರತಿ ಬೆಳಗಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ಈ ಘಟನೆ ನೋಣವಿನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
