ಕರ್ನಾಟಕ

ಪುತ್ರ ನಿಖಿಲ್ ಗೆಲುವಿಗಾಗಿ ಚಾಮುಂಡೇಶ್ವರಿ ಮೊರೆ ಹೋದ ತಂದೆ..!

ಕುಮಾರಸ್ವಾಮಿಗೆ ವಿಧಾನಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಸಚಿವರಾದ ಸಿಎಸ್. ಪುಟ್ಟರಾಜು, ಸಾರಾ.ಮಹೇಶ್, ಮಾಜಿ ಮೇಯರ್ ರವಿಕುಮಾರ್ ಸಾಥ್ ನಿಡಿದ್ದಾರೆ. ಕೋರ್ ಕಮಿಟಿ ಅಧ್ಯಕ್ಷ ಜಿಟಿ.ದೇವೇಗೌಡ ಅವರು ಕುಮಾರಸ್ವಾಮಿ ಜೊತೆಗೆ ಅಂತರ ಮುಂದುವರಿಸಿದ್ಧಾರೆ.

ಮೈಸೂರು : ಚನ್ನಪಟ್ಟಣದದಲ್ಲಿ ಉಪ ಚುನಾವಣೆ ಸಮರ ಜೋರಾಗಿ ನಡೆಯುತ್ತಿದ್ದು, ಮಗನ ಗೆಲುವಿಗಾಗಿ ತಂದೆ ಚಾಮುಂಡೇಶ್ವರಿ ಮೊರೆ ಹೋಗಿದ್ದಾರೆ. ಕೇಂದ್ರ ಸಚಿವ ಹಚ್‌ಡಿ.ಕುಮಾರಸ್ವಾಮಿ ಅವರು ನಾಡ ದೇವತೆ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ.

ಪುತ್ರ ನಿಖಿಲ್ ಗೆಲುವಿಗೆ ಚಾಮುಂಡೇಶ್ವರಿ ಮುಂದೆ ಪ್ರಾರ್ಥನೆ ಮಾಡಿದ್ದು, ದೇವಿ ದರ್ಶನ‌ ಪಡೆದು ಹೆಚ್.ಡಿ.ಕೆ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುಮಾರಸ್ವಾಮಿಗೆ ವಿಧಾನಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಸಚಿವರಾದ ಸಿಎಸ್. ಪುಟ್ಟರಾಜು, ಸಾರಾ.ಮಹೇಶ್, ಮಾಜಿ ಮೇಯರ್ ರವಿಕುಮಾರ್ ಸಾಥ್ ನಿಡಿದ್ದಾರೆ. ಕೋರ್ ಕಮಿಟಿ ಅಧ್ಯಕ್ಷ ಜಿಟಿ.ದೇವೇಗೌಡ ಅವರು ಕುಮಾರಸ್ವಾಮಿ ಜೊತೆಗೆ ಅಂತರ ಮುಂದುವರಿಸಿದ್ಧಾರೆ.