ಕರ್ನಾಟಕ

ರಾಜ್ಯ ರಾಜಧಾನಿಯಲ್ಲಿ ಹೆತ್ತ ಮಗನಿಂದಲೇ ತಂದೆಯ ಕೊಲೆ

ಕುಡಿತ ಚಟಕ್ಕೆ ದಾಸನಾಗಿದ್ದ ಆರೋಪಿ ಅಮಿತ್ ಬಿಎಸ್ಎಫ್ ಯೋಧನಾಗಿ ನಿವೃತ್ತಿ ಹೊಂದಿರುವ ತಂದೆ ಚನ್ನಬಸವಯ್ಯ ಕುಡಿಯಲು ಹಣ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿ ವಿಕೃತಿ ಮೆರೆದಿದ್ದಾನೆ.

ಹೆತ್ತ ಮಗನೇ ತಂದೆಯನ್ನ ಕೊಲೆ ಮಾಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.  ಬ್ಯಾಡರಹಳ್ಳಿಯ ಬಾಲಾಜಿ ಲೇಔಟ್ ನಲ್ಲಿ ಪುತ್ರ ಅಮಿತ್(26) ಎಂಬಾತ ತಂದೆ ಚನ್ನಬಸವಯ್ಯ ಎಂಬುವವರನ್ನ ಹತ್ಯೆಗೈದಿದ್ದಾನೆ.

ಕುಡಿತ ಚಟಕ್ಕೆ ದಾಸನಾಗಿದ್ದ ಆರೋಪಿ ಅಮಿತ್ ಬಿಎಸ್ಎಫ್ ಯೋಧನಾಗಿ ನಿವೃತ್ತಿ ಹೊಂದಿರುವ ತಂದೆ ಚನ್ನಬಸವಯ್ಯ ಕುಡಿಯಲು ಹಣ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿ ವಿಕೃತಿ ಮೆರೆದಿದ್ದಾನೆ. ಕುಡಿಯಲು ಹಣ ಕೊಡುವಂತೆ ಪೀಡಿಸ್ತಿದ್ದ ಅಮಿತ್‌, ಹಣ ಸಿಗದಿದ್ದಾಗ ತಾಯಿಯ ಚಿನ್ನದ ಬಳೆ, ಕಿವಿಯೋಲೆ ಕೇಳ್ತಿದ್ದ. ಅಷ್ಟೇ ಅಲ್ಲ ಮಾಂಗಲ್ಯ ಸರ ಕೂಡ ಕಿತ್ತು ಮಾರಾಟ ಮಾಡಿದ್ದ. ಇದರಿಂದಾಗಿ ಕೋಪಗೊಂಡ ತಂದೆ ಮಗನನ್ನ ಪ್ರಶ್ನೆ ಮಾಡಿದ್ದು, ಕೋಪಗೊಂಡ ಮಗ ತಂದೆಯನ್ನ ಬರ್ಬರವ ಆಗಿ ಹತ್ಯೆ ಮಾಡಿದ್ದಾನೆ. ಇನ್ನೂ ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸರು ಆರೋಪಿ ಅಮಿತ್‌ನನ್ನ ಬಂಧಿಸಿ ಸರೆಮನೆಗೆ ತಳ್ಳಿದ್ದಾರೆ.