ಬೆಂಗಳೂರು - ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಫೆಂಗಲ್ ಚಂಡಮಾರುತ ಎಫೆಕ್ಟ್ ಬಿದ್ದಿದೆ. ಪರಿಣಾಮ ನಗರದಲ್ಲಿ ಪೂರ್ಣ ಮೋಡ ಕವಿದ ವಾತಾವರಣ ಆವರಿಸಿದು, ತುಂತುರು ಮಳೆ ಕಾಡುತ್ತಿದೆ. ಇದರ ಮಧ್ಯೆ ಇಂದು ನಗರದಲ್ಲಿ ಕೆಲಸ ಹಾಗೂ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಪರದಾಡುವಂತೆ ಮಾಡಿದೆ.
ನಗರದ ಮೆಜೆಸ್ಟಿಕ್ , ಕಾರ್ಪೋರೇಷನ್ , ಎಂ.ಜಿ.ರೋಡ್ , ಚಂದ್ರಲೇಔಟ್ ಸೇರಿದಂತೆ ಹಲವೆಡೆ ಮಳೆ ಸುರಿಯುತ್ತಿದೆ. ಮಳೆ ನಡುವೆಯೂ ಸಾರ್ವಜನಿಕರು ತಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮುಂದಿನ ಎರಡು ದಿನಗಳು ಮಳೆ ಹೀಗೆ ಮುಂದುವರೆಯಲಿದೆ. ಚೆನ್ನೈನಲ್ಲಿ ಸದ್ಯ ಬಾರಿ ಮಳೆಯಿಂದಾಗಿ ಭಾರೀ ಅನಾಹುತಗಳು ಸಂಭವಿಸಿದೆ.