ಕರ್ನಾಟಕ

ಕೋವಿಡ್‌ ಹಗರಣದ ವಿರುದ್ಧ ಎಫ್‌ಐಆರ್..ಮುಂದೇನು..?

ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಈ ಕೋವಿಡ್ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ, ಇದೀಗ ಎಫ್ಐಆರ್‌ ದಾಖಲಾಗಿದೆ.

ಬಿಜೆಪಿ  ಸರ್ಕಾರದ ಅವಧಿಯಲ್ಲಿ ಕೋವಿಡ್‌ ಅಬ್ಬರ ಹೇಗಿತ್ತು ಅನ್ನೋದು ಎಲ್ಲರಿಗೂ ಗೊತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡು  ಹಗರಣ ಕೂಡ ಮಾಡಲಾಗಿದೆ ಎಂಬ ಆರೋಪ ಕೂಡ ಹಲವು ದಿನಗಳಿಂದ ಸದ್ದು ಮಾಡುತ್ತಿದೆ.  ಬಿಜೆಪಿ ಅವಧಿಯಲ್ಲಿ  ನಡೆದಿದೆ ಎನ್ನಲಾದ ಈ ಕೋವಿಡ್ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ, ಇದೀಗ ಎಫ್ಐಆರ್‌ ದಾಖಲಾಗಿದೆ. ಐವರು ವೈದ್ಯರು, ಲ್ಯಾಗ್ ಎಕ್ಸ್ಪರ್ಟ್ ಕಂಪನಿ‌ ಹಾಗೂ ಜನಪ್ರತಿನಿಧಿಗಳ‌ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ SIT ರಚನೆ ಮಾಡುವ ಸಾಧ್ಯತೆ ಇದೆ.  ಹೀಗಾಗಿ ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಲಿದೆ.

ಅಂದ್ಹಾಗೆ ಈ ಒಟ್ಟು 167 ಕೋಟಿಗೂ ಅಧಿಕ ಹಣ ಅಕ್ರಮ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಡಾ.ಗಿರೀಶ್, ಜಿ.ಪಿ.ರಘು, .ಮುನಿರಾಜ್, ಲಾಜ್ ಎಕ್ಸ್ಪೋರ್ಟ್, ಪ್ರೂಡೆಂಟ್‌ ಮ್ಯಾನೆಜ್‌ಮೆಂಟ್‌ ಸಲೂಷನ್ಸ್ ಕಂಪನಿ ಸೇರಿದಂತೆ ಕೆಲ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಲ್ಲದೇ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆಯಾಗುವ ಸಾಧ್ಯತೆ ಕೂಡ ಇದೆ.